ಹರಾಜಿನಲ್ಲಿ ಗೆದ್ದ ಸೂಟ್​ಕೇಸ್​ ಅನ್ನು ಮನೆಯಲ್ಲಿ ತೆರೆದು ನೋಡಿದಾಗ ಇಡೀ ಕುಟುಂಬವೇ ಶಾಕ್! | Shocking news family wins suitcases stuffed with dead bodies in new Zealand


ಹರಾಜಿನಲ್ಲಿ ಭಾಗಿಯಾಗಿದ್ದ ಕುಟುಂಬವೊಂದು ಸೂಟ್​ಕೇಸ್​ಗಳನ್ನು ತನ್ನದಾಗಿಸಿಕೊಂಡಿದೆ. ನಿಯಮಗಳ ಪ್ರಕಾರ ಮನೆಗೆ ಹೋಗಿ ತೆರೆದು ನೋಡಿದಾಗ ಇಡೀ ಕುಟುಂಬವೇ ಭೀತಿಗೊಂಡಿದೆ. ಈ ಬಗ್ಗೆ ಕುತೂಹಲಕಾರಿ ಸ್ಟೋರಿ ಇಲ್ಲಿದೆ..

ಹರಾಜಿನಲ್ಲಿ ಗೆದ್ದ ಸೂಟ್​ಕೇಸ್​ ಅನ್ನು ಮನೆಯಲ್ಲಿ ತೆರೆದು ನೋಡಿದಾಗ ಇಡೀ ಕುಟುಂಬವೇ ಶಾಕ್!

ಸೂಟ್​ಕೇಸ್

ಅದೇನು ಅದೃಷ್ಟವೋ ಹರಾಜಿನಲ್ಲಿ ಭಾಗಿಯಾಗಿದ್ದ ಕುಟುಂಬವೊಂದು ಸೂಟ್​ಕೇಸ್​ಗಳನ್ನು(Suitcases) ತನ್ನದಾಗಿಸಿಕೊಂಡಿದೆ. ನಿಯಮಗಳಂತೆ ಅದನ್ನು ಸ್ಥಳದಲ್ಲೇ ತೆರೆದು ನೋಡುವಂತಿಲ್ಲ, ಅದರಂತೆ ಅದರಲ್ಲೇನಿದೆಯೋ ಎಂಬ ಕುತೂಹಲದಲ್ಲೇ ಖುಷಿ ಖುಷಿಯಾಗಿ ಮನೆಗೆ ತೆರಳಿದ ಕುಟುಂಬ ಸೂಟ್​ಕೇಸ್ ತೆರೆದು ನೋಡಿದಾಗ ನಿಬ್ಬೆರಗಾಗಿದೆ. ಹಾಗಿದ್ದರೆ ಆ ಸೂಟ್​ಕೇಸ್​ನಲ್ಲಿ ಇದ್ದದ್ದಾದರೂ ಏನು? ಕುತೂಹಲಕಾರಿ ಸುದ್ದಿ ಇಲ್ಲಿದೆ ಓದಿ…

ನ್ಯೂಜಿಲೆಂಡ್‌ನ ದಕ್ಷಿಣ ಆಕ್ಲೆಂಡ್‌ನ ಕುಟುಂಬವೊಂದು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿತ್ತು. ಅದರಂತೆ ಹರಾಜಿನಲ್ಲಿ ನಡೆದ ಡ್ರಾದಲ್ಲಿ ಆ ಕುಟುಂಬವು 5 ಸೂಟ್‌ಕೇಸ್‌ಗಳನ್ನು ಗೆದ್ದುಕೊಂಡಿದೆ. ಹರಾಜು ನಡೆಯುತ್ತಿದ್ದಾಗ ಆ ಸೂಟ್‌ಕೇಸ್‌ಗಳನ್ನು ತೆರೆಯಬಾರದು ಎಂಬ ನಿಯಮವಿದ್ದುದರಿಂದ ಮನೆಗೆ ಹೋಗಿ ತೆರೆದಿದ್ದಾರೆ. ಹೀಗೆ ಸೂಟ್​ಕೇಸ್​ಗಳನ್ನು ತೆರೆದ ಕುಟುಂಬಕ್ಕೆ ಸಿಕ್ಕಿದ್ದು ಮಾನವನ ಅವಶೇಷಗಳು.

ಭೀತಿಗೊಂಡ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಬಂದ ಪೊಲೀಸರು, ಅವಶೇಷಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರ ಹೇಳಿಕೆ ಪ್ರಕಾರ, ಈ ಕುಟುಂಬಕ್ಕೂ ಕೊಲೆಗೂ ಯಾವುದೇ ಸಂಬಂಧವಿಲ್ಲ. ಆದರೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ತೆಲುಗಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.