ಉಡುಪಿಯ ಬೀಡಿನಗುಡ್ಡೆಯಲ್ಲಿರುವ ಹರಿಜನ ಕಾಲೋನಿಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಣತೆ ದೀಪ ಬೆಳಗಿ ದೀಪಾವಳಿ ಹಬ್ಬ ಆಚರಿಸಿದರು.
ಬಳಿಕ ಅಲ್ಲಿನ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ದೇವರ ಸಾಲಂಕೃತ ಭಾವಚಿತ್ರಗಳಿಗೆ ಮಂಗಳಾರತಿ ಬೆಳಗಿ, ಕಾಲೋನಿ ನಿವಾಸಿಗಳು ಅರ್ಪಿಸಿದ ಭಕ್ತಿ ಗೌರವವನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು.
ಆ ಬಳಿಕ ವಿಶ್ವಪ್ರಸನ್ನ ತೀರ್ಥರು ಮಾತನಾಡಿದ್ದು, ನಮ್ಮ ಪೂರ್ವಜರು ಹಾಕಿಕೊಟ್ಟ ಸನಾತನ ಸಂಪ್ರದಾಯ ಮತ್ತು ಆಚರಣೆಗಳನ್ನು ಮುಂದುವರೆಸಿಕೊಂಡು ಬರಬೇಕು ಎಷ್ಟೇ ಕಷ್ಟ ಬಂದರೂ ದೇವರ ಸ್ಮರಣೆ ತಪ್ಪಬಾರದು ಎಂದು ಸಲಹೆ ನೀಡಿದ್ರು.