ಹರಿಣಗಳ ನಾಡಲ್ಲಿ ಶತಕ ಸಿಡಿಸಿದ ಪಂತ್​ ಬಗ್ಗೆ ಸೆಹ್ವಾಗ್​ ಹೇಳಿದ್ದೇನು..?


ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ನೆರವಾಗಿದ್ದು ನಾಯಕ ವಿರಾಟ್​ ಕೊಹ್ಲಿ ಮತ್ತು ರಿಷಭ್​​ ಪಂತ್​​ ಜೊತೆಯಾಟ. ಈ ಜೋಡಿ ತಂಡಕ್ಕೆ 94 ರನ್​​ಗಳ ಕಾಣಿಕೆ ನೀಡ್ತು. ಪರಿಣಾಮ ಭಾರತ ಚೇತರಿಕೆಯತ್ತ ಹೆಜ್ಜೆ ಹಾಕ್ತು. ಇದೇ ವೇಳೆ ಪಂತ್​ ಸ್ಫೋಟಕ ಬ್ಯಾಟಿಂಗ್​ ನಡೆಸಿ ಶತಕ ಸಿಡಿಸಿದ್ರು.

58ಕ್ಕೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಅದ್ಭುತ ಕೊಡುಗೆ ನೀಡಿದ್ರು ಪಂತ್​. ಸತತ ವಿಕೆಟ್​ ಉರುಳುತ್ತಿದ್ದರೂ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ರಿಷಭ್‌ ತಮ್ಮ ಹೊಡಿ ಬಡಿ ಆಟ ಮುಂದುವರಿಸಿ ಟೆಸ್ಟ್‌ ವೃತ್ತಿಬದುಕಿನ 4ನೇ ಶತಕ ಬಾರಿಸಿದರು. ಆ ಮೂಲಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸಿದ ಭಾರತದ ಮೊದಲ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪಂತ್​ ಆಟಕ್ಕೆ ಟೀಮ್ ಇಂಡಿಯಾದ ಮಾಜಿ ಓಪನರ್‌ ವೀರೇಂದ್ರ ಸೆಹ್ವಾಗ್‌ ಯುವ ಆಟಗಾರನ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಿಷಭ್‌ ಪಂತ್‌ ಅದ್ಭುತ ಸೆಂಚೂರಿ ಬಾರಿಸಿದ್ದಾರೆ. ಇನಿಂಗ್ಸ್‌ನಲ್ಲಿ ಭಾರತದ ಪರ ಪಂತ್ ಹೊರತಾಗಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿಯ ಸ್ಕೋರ್‌ ಮಾಡಿದ್ದು, ಈ ಶತಕದ ಮಹತ್ವವನ್ನು ತಿಳಿಸಿಕೊಡುತ್ತದೆ. ಅವರು ಏಕಾಂಗಿಯಾಗಿ ಹೋರಾಟ ನಡೆಸಿ ಭಾರತ ತಂಡವನ್ನು ಮೇಲೆತ್ತಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ರಿಷಬ್​ ಭಾರತ ತಂಡದ ದೊಡ್ಡ ಮ್ಯಾಚ್‌ ವಿನ್ನರ್‌ ಎಂದು ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ.

 

News First Live Kannada


Leave a Reply

Your email address will not be published. Required fields are marked *