ಹರಿದ ಬಟ್ಟೆ, ಹಣೆಯಲ್ಲಿ ರಕ್ತ; ನಟಿ ರಂಜನಿ ರಾಘವನ್ ಹಂಚಿಕೊಂಡ ವಿಡಿಯೋ ನೋಡಿ ಗಾಬರಿಗೊಳ್ಳಬೇಡಿ | Kannadathi Serial Actress Ranjani Raghavan Shares head full of blood photo


ಹರಿದ ಬಟ್ಟೆ, ಹಣೆಯಲ್ಲಿ ರಕ್ತ; ನಟಿ ರಂಜನಿ ರಾಘವನ್ ಹಂಚಿಕೊಂಡ ವಿಡಿಯೋ ನೋಡಿ ಗಾಬರಿಗೊಳ್ಳಬೇಡಿ

ರಂಜನಿ

ನಟಿ ರಂಜನಿ ರಾಘವನ್ (Ranjani Raghavan) ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ತಮ್ಮ ದಿನಚರಿ ಬಗ್ಗೆ ಅಪ್​​ಡೇಟ್ ನೀಡುತ್ತಿರುತ್ತಾರೆ. ಈಗ ಅವರ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರ ಕೈ ತೋಳು ಹರಿದಿದೆ. ಹಣೆಯಿಂದ ರಕ್ತ ಒಂದೇ ಸಮನೆ ಸುರಿಯುತ್ತಿದೆ. ಹಾಗಂತ ಈ ವಿಡಿಯೋ ನೋಡಿ ಗಾಬರಿಗೊಳ್ಳಬೇಡಿ. ನೀವಂದುಕೊಂಡ ಹಾಗೆ ರಂಜನಿ ರಾಘವನ್​ ಅವರಿಗೆ ಏನೂ ಆಗಿಲ್ಲ. ‘ಕನ್ನಡತಿ’ ಧಾರಾವಾಹಿ (Kannadathi Serial) ಶೂಟಿಂಗ್​ಗಾಗಿ ಅವರು ಈ ರೀತಿ ಅವತಾರಾ ತಾಳಿದ್ದಾರೆ. ಈ ವಿಡಿಯೋ ನೋಡಿದ ಕೆಲವರು ಆತಂಕ ಹೊರಹಾಕಿದ್ದಾರೆ. ಅಸಲಿ ವಿಚಾರ ಗೊತ್ತಿರುವವರು ವಿಡಿಯೋ ನೋಡಿ ನಕ್ಕಿದ್ದಾರೆ.

‘ಕನ್ನಡತಿ’ ಧಾರಾವಾಹಿ ಮಹತ್ವದ ಘಟ್ಟ ತಲುಪಿದೆ. ವರುಧಿನಿ (ಸಾರಾ ಅಣ್ಣಯ್ಯ) ಹಾಗೂ ಭುವಿ (ರಂಜನಿ) ಗುಡ್ಡ ಏರಿದ್ದರು. ಭುವಿಯನ್ನು ಹತ್ಯೆ ಮಾಡಲು ಸಾನಿಯಾ ಸುಪಾರಿ ನೀಡಿದ್ದಳು. ಅಂತೆಯೇ ಸುಪಾರಿ ಕಿಲ್ಲರ್ ಭುವಿಯನ್ನು ಬೆಟ್ಟದಿಂದ ತಳ್ಳಿದ್ದಾನೆ. ಆಕೆಯನ್ನು ವರು ರಕ್ಷಣೆ ಮಾಡಿದ್ದಾಳೆ. ಕಲ್ಲು ಬಂಡೆಯ ಮೇಲೆ ಅಂಗಾತ ಮಲಗಿದ್ದಳು ಭುವಿ. ಆಗ ಅವಳ ಹಣೆಯಲ್ಲಿ ರಕ್ತ ಸುರಿಯುತ್ತಿತ್ತು. ರಂಜನಿ ಹಂಚಿಕೊಂಡಿರುವ ವಿಡಿಯೋ ಈ ದೃಶ್ಯದ ಶೂಟಿಂಗ್ ಸಂದರ್ಭದಲ್ಲಿ ಸೆರೆ ಹಿಡಿದಿದ್ದು.

ಈ ವಿಡಿಯೋಗೆ ಭುವಿ ಸಖತ್ ಫನ್ನಿಯಾಗಿ ಕ್ಯಾಪ್ಶನ್ ನೀಡಿದ್ದಾರೆ. ‘ಅಮ್ಮಮ್ಮ- ನೋಡು ನಿನ್ ಅವತಾರ. ನಾನು- ಎರಡು ಕಣ್ಣು ಸಾಲ್ತಿಲ್ಲ. ಬಿಂದು- ಇರಿ, ಇದನ್ನೆಲ್ಲಾ ವಿಡಿಯೋ ಮಾಡ್ತೀನಿ’ ಎಂದು ಬರೆದುಕೊಂಡಿದ್ದಾರೆ ಅವರು. ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಇದಕ್ಕೆ ಅನೇಕರು ಫನ್ನಿಯಾಗಿಯೇ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ‘ಕನ್ನಡತಿ’ ತಂಡವನ್ನು ಹೊಗಳಿದ್ದಾರೆ.

‘ನಿಮಗೆ ಹಾಗೂ ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್​ ಆಫ್. ಇಡೀ ‘ಕನ್ನಡತಿ’ ತಂಡಕ್ಕೆ ಬಿಗ್ ಸೆಲ್ಯೂಟ್. ಅಂತಹ ಜಾಗದಲ್ಲಿ ಶೂಟಿಂಗ್ ಮಾಡಿ ಒಳ್ಳೆಯ ಸಂಚಿಕೆ ಕೊಟ್ಟಿದ್ದೀರಿ’ ಎಂದು ಅಭಿಮಾನಿಯೋರ್ವ ಈ ಪೋಸ್ಟ್​ಗೆ ಕಮೆಂಟ್ ಮಾಡಿದ್ದಾರೆ. ಕಳೆದ ಕೆಲವು ಸಂಚಿಗಳನ್ನು ಅತಿ ಆಯಕಟ್ಟಿನ ಜಾಗದಲ್ಲಿ ಶೂಟಿಂಗ್ ಮಾಡಲಾಗಿತ್ತು. ಈ ಕಾರಣಕ್ಕೆ ಅಭಿಮಾನಿಗಳು ಈ ರೀತಿಯ ಮೆಚ್ಚುಗೆ ಸೂಚಿಸುತ್ತಿದ್ದಾರೆ.

‘ಕನ್ನಡತಿ’ ಧಾರಾವಾಹಿ ವಿಚಾರಕ್ಕೆ ಬರೋದಾದರೆ ಹರ್ಷ ಹಾಗೂ ಭುವಿಯ ನಿಶ್ಚಿತಾರ್ಥ ನೆರವೇರಿದೆ. ಇದಾದ ಬಳಿಕ ಹಲವು ಘಟನೆಗಳು ನಡೆದವು. ಭುವಿಯನ್ನು ಸುಪಾರಿ ಕಿಲ್ಲರ್ ತಳ್ಳಿದ್ದಾನೆ. ಭುವಿಯ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಆಕೆಯನ್ನು ಐಸಿಯುನಲ್ಲಿ ಅಡ್ಮಿಟ್ ಮಾಡಲಾಗಿದೆ. ಭುವಿ ಬೀಳುವ ಸಂದರ್ಭದಲ್ಲಿ ಆಕೆಯ ಜತೆ ಇದ್ದಿದ್ದು ವರುಧಿನಿ. ಈ ಕಾರಣಕ್ಕೆ ವರುಧಿನಿ ವಿರುದ್ಧ ಹರ್ಷ ಸಿಟ್ಟಾಗಿದ್ದಾನೆ.

TV9 Kannada


Leave a Reply

Your email address will not be published. Required fields are marked *