ಹರಿಯಾಣದಲ್ಲಿ BPL ಕುಟುಂಬಗಳಿಗೆ ತಲಾ ₹5000 ಕೊರೊನಾ ಪರಿಹಾರ

ಹರಿಯಾಣದಲ್ಲಿ BPL ಕುಟುಂಬಗಳಿಗೆ ತಲಾ ₹5000 ಕೊರೊನಾ ಪರಿಹಾರ

ಹರಿಯಾಣದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್​​ ಜಾರಿ ಮಾಡಿದ್ದು, ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಕಾರ್ಮಿಕರು ಸೇರಿದಂತೆ ಬಡವರ್ಗದ ಜೀವನಾಧಾರಕ್ಕೆ ಹೊಡೆತ ಬಿದ್ದಿರೋ ಹಿನ್ನೆಲೆ ಸಿಎಂ ಮನೋಹರ್ ಲಾಲ್ ಕಟ್ಟರ್​ ಸರ್ಕಾರ ಕೊರೊನಾ ಪರಿಹಾರ ಹಣ ನೀಡಲು ಮುಂದಾಗಿದೆ.

ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್​​​ ಹೋಲ್ಡರ್​​ಗಳಿಗೆ​(ಬಡತನ ರೇಖೆಗಿಂತ ಕೆಳಗಿರುವವರಿಗೆ) ಕೊರೊನಾ ಪರಿಹಾರವಾಗಿ ತಲಾ 5 ಸಾವಿರ ರೂಪಾಯಿ ಹಣ ನೀಡೋದಾಗಿ ಗೃಹ ಸಚಿವ ಅನಿಲ್​ ವಿಜ್​ ನಿನ್ನೆ ಹೇಳಿದ್ದಾರೆ.

ಕೊರೊನಾ ಅಬ್ಬರ ತಗ್ಗಿಸಲು ಕಳೆದ ಭಾನುವಾರ ಹರಿಯಾಣ ಸರ್ಕಾರ ಲಾಕ್​ಡೌನ್ ವಿಸ್ತರಣೆ ಮಾಡಿದೆ. ಮೇ 10ರಿಂದ 17ರವರೆಗೆ ಒಂದು ವಾರದ ಕಾಲ ಸುರಕ್ಷಿತ್​ ಹರಿಯಾಣ ಹೆಸರಲ್ಲಿ ಮಾರ್ಗಸೂಚಿ ಜಾರಿ ಮಾಡಲಾಗಿದೆ. ಇದರ ಅಡಿ ಮೊದಲನೇ ಲಾಕ್​ಡೌನ್ ನಿಯಮಗಳ​ ಜೊತೆಗೆ ಹಲವು ಕಠಿಣ ನಿಯಮಗಳನ್ನ ಸೇರಿಸಲಾಗಿದೆ. ಮದುವೆ, ಅಂತ್ಯಸಂಸ್ಕಾರ ಸೇರಿದಂತೆ ಯಾವುದೇ ಸ್ಥಳದಲ್ಲಿ 11ಕ್ಕಿಂತ ಹೆಚ್ಚಿನ ಜನರು ಒಂದೆಡೆ ಸೇರುವಂತಿಲ್ಲ. ಹಾಗೇ ಯಾವುದೇ ರೀತಿಯ ಮೆರವಣಿಗೆ ನಡೆಸದಂತೆ ನಿಷೇಧ ವಿಧಿಸಲಾಗಿದೆ.

The post ಹರಿಯಾಣದಲ್ಲಿ BPL ಕುಟುಂಬಗಳಿಗೆ ತಲಾ ₹5000 ಕೊರೊನಾ ಪರಿಹಾರ appeared first on News First Kannada.

Source: newsfirstlive.com

Source link