ತುಮಕೂರು: ಕೆರೆ ಕೋಡಿ ಹರಿದು ಹಳ್ಳಕ್ಕೆ ಬಂದ ಮೀನುಗಳನ್ನು ಹಿಡಿಯಲು ಜನ ಮುಗುಬಿದ್ದಿರುವ ಘಟನೆ ಜಿಲ್ಲೆಯ ಶಿರಾಪಟ್ಟಣ ಚಿಕ್ಕಕೆರೆಯಲ್ಲಿ ನಡೆದಿದೆ.
ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಚಿಕ್ಕಕೆರೆ ಸಂಪೂರ್ಣ ತುಂಬಿದ್ದು ಕೋಡಿ ಬಿದ್ದಿದೆ. ಪರಿಣಾಮ ನೀರು ಹರಿದು ಚಿಕ್ಕಪುಟ್ಟ ಹಳ್ಳವನ್ನು ಸೇರುತ್ತಿದ್ದು ನೀರಿನ ಹರಿವಿನಗುಂಟ ಸಾಕಷ್ಟು ಮೀನುಗಳು ಬರುತ್ತಿವೆ. ಇದನ್ನು ಕಂಡ ಸ್ಥಳಿಯರು ಚಿಕ್ಕ ಮೀನಿನ ಬಲೆಗಳನ್ನು ಹಿಡಿದ್ದು ರಾಶಿ ರಾಶಿ ಮೀನುಗಳನ್ನು ಬಾಚಿಕೊಳ್ಳುವಲ್ಲಿ ನಿರತರಾಗಿದ್ದಾರೆ.
ಅಷ್ಟೇ ಅಲ್ಲದೆ ಮೀನುಗಳು ನೀರಿನಗುಂಟ ಬರುತ್ತಿರುವ ವಿಷಯ ತಿಳಿದ ಬೇರೆ ಗ್ರಾಮೀಣ ಭಾಗದ ಜನರು. ತಮ್ಮೂರಿನ ಹಳ್ಳದ ಬಳಿಯು ಬಲೆಗಳನ್ನು ಹಿಡಿದು ಮೀನಿಗಾಗಿ ತಡಕಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ವಾಹನ ಸವಾರರ ಹುಚ್ಚಾಟ.. ನೀರಿನ ಸೆಳೆತದಲ್ಲಿ ಪ್ರಾಣ ಉಳಿದಿದ್ದೇ ದೊಡ್ಡದು..!
ಇದನ್ನೂ ಓದಿ:ಭಾರೀ ಮಳೆಗೆ ಕೊಟ್ಟಿಗೆಯ ಗೋಡೆ ಕುಸಿದು ವೃದ್ಧ ಸಾವು