‘ಹರಿ ಹರ ವೀರಮಲ್ಲು’ ಚಿತ್ರಕ್ಕಾಗಿ ಮಾಸ್ ಅವತಾರ ತಾಳಿದ ಪವನ್ ಕಲ್ಯಾಣ್​; ಬರ್ತ್​ಡೇಗೆ ಟೀಸರ್ ಗಿಫ್ಟ್ | Pawan Kalyan Birthday Hari Hara Veera Mallu Teaser Released


ಒಂದು ನಿಮಿಷದ ಟೀಸರ್​ ಸಂಪೂರ್ಣವಾಗಿ ಮಾಸ್ ಆಗಿದೆ. ಫೈಟಿಂಗ್​​ಗೆ ನಿಂತವರನ್ನು ಪವನ್ ಕಲ್ಯಾಣ್ ಎತ್ತಿ ಬಿಸಾಡಿದ್ದಾರೆ. ಅವರು ಪೈಲ್ವಾನ್ ರೀತಿಯಲ್ಲಿ ಮಿಂಚಿದ್ದಾರೆ.

‘ಹರಿ ಹರ ವೀರಮಲ್ಲು’ ಚಿತ್ರಕ್ಕಾಗಿ ಮಾಸ್ ಅವತಾರ ತಾಳಿದ ಪವನ್ ಕಲ್ಯಾಣ್​; ಬರ್ತ್​ಡೇಗೆ ಟೀಸರ್ ಗಿಫ್ಟ್

ಪವನ್ ಕಲ್ಯಾಣ್

ಟಾಲಿವುಡ್​ನ ಪವರ್​ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಅವರಿಗೆ ಇಂದು (ಸೆಪ್ಟೆಂಬರ್ 2) ಬರ್ತ್​ಡೇ ಸಂಭ್ರಮ. ಟಾಲಿವುಡ್​ನ ಸ್ಟಾರ್​ ನಟನಿಗೆ ಮಹೇಶ್ ಬಾಬು (Mahesh Babu), ಚಿರಂಜೀವಿ ಸೇರಿ ಅನೇಕ ಸೆಲೆಬ್ರಿಟಿ​ಗಳಿಂದ ಬರ್ತ್​ಡೇ ವಿಶ್ ಬರುತ್ತಿದೆ. ಫ್ಯಾನ್ಸ್ ಸಂಭ್ರಮಾಚರಣೆ ಕೂಡ ಮುಗಿಲು ಮುಟ್ಟಿದೆ. ಈ ಮಧ್ಯೆ ಅವರ ಮುಂದಿನ ಚಿತ್ರ ‘ಹರಿ ಹರ ವೀರಮಲ್ಲು’  (Hari Hara Veera Mallu Movie)ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್​ನಲ್ಲಿ ಪವನ್ ಕಲ್ಯಾಣ್ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.

ಸೆಲೆಬ್ರಿಟಿಗಳ ಬರ್ತ್​ಡೇ ಸಂದರ್ಭದಲ್ಲಿ ಹೊಸ ಚಿತ್ರದ ಟೀಸರ್ ಅಥವಾ ಟ್ರೇಲರ್ ರಿಲೀಸ್ ಆಗೋದು ಸಾಮಾನ್ಯ. ಅದೇ ರೀತಿ ಪವನ್ ಕಲ್ಯಾಣ್ ಜನ್ಮದಿನದ ಪ್ರಯುಕ್ತ ‘ಹರಿ ಹರ ವೀರಮಲ್ಲು’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ಮಾಸ್​ ಅಂಶಗಳಿವೆ ಎಂಬುದಕ್ಕೆ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ.

ಒಂದು ನಿಮಿಷದ ಟೀಸರ್​ ಸಂಪೂರ್ಣವಾಗಿ ಮಾಸ್ ಆಗಿದೆ. ಫೈಟಿಂಗ್​​ಗೆ ನಿಂತವರನ್ನು ಪವನ್ ಕಲ್ಯಾಣ್ ಎತ್ತಿ ಬಿಸಾಡಿದ್ದಾರೆ. ಅವರು ಪೈಲ್ವಾನ್ ರೀತಿಯಲ್ಲಿ ಮಿಂಚಿದ್ದಾರೆ. ಎಂ.ಎಂ. ಕೀರವಾಣಿ ಅವರ ಹಿನ್ನೆಲೆ ಸಂಗೀತ ಟೀಸರ್​ನಲ್ಲಿ ಗಮನ ಸೆಳೆದಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

‘ಹರಿ ಹರ ವೀರಮಲ್ಲು’ ಚಿತ್ರಕ್ಕೆ ಜಾಗರಲಮುಡಿ ರಾಧಾಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ ಅನುಭವ ಅವರಿಗೆ ಇದೆ. ಎ ದಯಾಕರ್ ರಾವ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಕೆಲಸಗಳು ಭರದಿಂದ ಸಾಗಿದ್ದು, ಚಿತ್ರ ಯಾವಾಗ ರಿಲೀಸ್ ಆಗಲಿದೆ ಎಂದು ಫ್ಯಾನ್ಸ್ ಕಾದಿದ್ದಾರೆ.

TV9 Kannada


Leave a Reply

Your email address will not be published.