ಹರ್ಷನಿಗೆ ವರುಧಿನಿಯ ಮೇಲೆ ಪ್ರೀತಿ ಮೂಡಿಲ್ಲ. ಇದನ್ನು ಹರ್ಷ ಅನೇಕ ಬಾರಿ ಹೇಳಿದ್ದಾನೆ. ಆದರೆ, ವರುಧಿನಿ ಇದನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಹಾಗೂ ಭುವಿ ಮದುವೆಗೆ ದಿನಾಂಕ ನಿಗದಿ ಆಗಿದೆ. ಶೀಘ್ರದಲ್ಲೇ ಇಬ್ಬರೂ ಹಸೆಮಣೆ ಏಲಿದ್ದಾರೆ. ಇವರ ಮದುವೆಯನ್ನು ನಡೆಸಿಕೊಡುವ ಜವಾಬ್ದಾರಿ ವರುಧಿನಿಗೆ ನೀಡಲಾಗಿದೆ. ಇದು ಕಳ್ಳನ ಕೈಗೆ ಮನೆಯ ಕೀ ಕೊಟ್ಟಂತೆ ಆಗಿದೆ. ಹರ್ಷನನ್ನು ಮದುವೆ ಆಗೋಕೆ ವರುಧಿನಿ ಬೇರೆಯದೇ ಪ್ಲ್ಯಾನ್ ರೂಪಿಸುತ್ತಿದ್ದಾಳೆ. ಹೀಗಾಗಿ, ಹಸೆಮಣೆ ಮೇಲೆ ಕೊನೆಯ ಕ್ಷಣದಲ್ಲಿ ವಧು ಬದಲಾದರೂ ಅಚ್ಚರಿ ಏನಿಲ್ಲ. ಸದ್ಯ, ಹೊಸಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿರುವ ‘ಕನ್ನಡತಿ’ಯ ಕಥೆಗೆ ಮತ್ತೊಂದು ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.
ಹರ್ಷ ಹಾಗೂ ಭುವಿ ಪರಸ್ಪರ ಪ್ರೀತಿಸುತ್ತಿದ್ದವರು. ಇತ್ತೀಚೆಗೆ ಅವರ ನಿಶ್ಚಿತಾರ್ಥ ಕೂಡ ನಡೆದಿದೆ. ವರುಧಿನಿ ಕೂಡ ಹರ್ಷನನ್ನು ಪ್ರೀತಿ ಮಾಡುತ್ತಿದ್ದಾಳೆ. ಆದರೆ, ಒಂದು ದಿನವೂ ಹರ್ಷನಿಗೆ ವರುಧಿನಿಯ ಮೇಲೆ ಪ್ರೀತಿ ಮೂಡಿಲ್ಲ. ಇದನ್ನು ಹರ್ಷ ಅನೇಕ ಬಾರಿ ಹೇಳಿದ್ದಾನೆ. ಆದರೆ, ವರುಧಿನಿ ಇದನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹರ್ಷನನ್ನು ಪಡೆದುಕೊಳ್ಳೋಕೆ ಕೊನೆಯ ಕ್ಷಣದವರೆಗೂ ಹೊಸಹೊಸ ಪ್ಲ್ಯಾನ್ ರೂಪಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ.