ಗದಗ: ಕೊರೊನಾ ಎರಡನೇ ಅಲೆಯ ನಡುವೆ ಹಲವಾರು ಮಂದಿ ಬಡವರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ. ಗದಗ ಜಿಲ್ಲೆಯ ಕಳಸಾಪುರದಲ್ಲಿ ನಡೆದ ಮದುವೆಯೊಂದರಲ್ಲಿ ಜನರಿಗೆ ಊಟ ಬಡಿಸುವ ಬದಲು ವಧು ವರರು ಬಡಜನರಿಗೆ ದಿನಸಿ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೊಣಚ್ಚ ರಾಜ್ಯಾದ್ಯಂತ ಕೊರೊನಾ ಜಾಗೃತಿ ಮೂಡಿಸುವ ಜೊತೆಗೆ ಬಡ ಜನರಿಗೆ ದಿನಸಿ ಕಿಟ್ ಹಂಚಿ ಮಾನವೀಯತೆ ಮೆರೆಯುತ್ತಿದ್ದಾರೆ. ಅದೇ ರೀತಿ ನಿನ್ನೆ ಗದಗ ನಗರಕ್ಕೆ ಬಂದಿದ್ದರು. ಈ ವೇಳೆ ಭುವನ್ ಅವರ ಅಭಿಮಾನಿಯಾದ ಕೃಷ್ಣ ತಮ್ಮ ನೆಚ್ಚಿನ ನಟರ ಸಾಮಾಜಿಕ ಕಾರ್ಯಗಳಿಂದ ಪ್ರೇರೇಪಣೆಗೊಂಡು ತಮ್ಮ ಮದುವೆಯಲ್ಲೂ ಬಡ ಜನರಿಗೆ ಸಹಾಯ ಮಾಡಿದ್ದಾರೆ.

ಮದುವೆಗೆ ಬಂದಿದ್ದ ಅಷ್ಟು ಬಡ ಕುಟುಂಬಗೆ ದಿನಸಿ ಕಿಟ್, ಔಷಧಿ, ಮಾಸ್ಕ್ ವಿತರಿಸಲಾಗಿತು. ಹಾಗೆ ಮದುವೆ ಕಾರ್ಯಕ್ರಮದಲ್ಲಿ ಕೊರೊನಾ ಬಗ್ಗೆ ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ಕೊರೊನಾ ಜಾಗೃತಿ ಮೂಡಿಸಿದರು.

The post ಹರ್ಷಿಕಾ-ಭುವನ್ ಪ್ರೇರಣೆ: ಮದುವೆಯಲ್ಲಿ ಊಟದ ಬದಲು, ಬಡವರಿಗೆ ದಿನಸಿ ಕಿಟ್ ಕೊಟ್ಟ ವಧು ವರ appeared first on News First Kannada.

Source: newsfirstlive.com

Source link