ಅರಮನೆ ಮೈದಾನದ ತ್ರಿಪುರನಿವಾಸಿಯಲ್ಲಿ ಅಪ್ಪು ಅಭಿಮಾನಿಗಳಿಗೆ ದೊಡ್ಮನೆ ಕುಟುಂಬ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದೆ. ಮತ್ತೊಂದು ಕಡೆ ಪತ್ರಕರ್ತರು ರಕ್ತದಾನ, ನೇತೃದಾನ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದಾರೆ.
ಲಯನ್ಸ್ ಕ್ಲಬ್ ವತಿಯಿಂದ ರಕ್ತದಾನ ಕಾರ್ಯಕ್ರಮ ನಡೆಯುತ್ತಿದೆ. ಜೊತೆಗೆ ರಾಜಕುಮಾರ್ ನೇತ್ರದಾನ ಕೇಂದ್ರದಿಂದ ನೇತ್ರದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಸುದ್ದಿವಾಹಿನಿಯ ವರದಿಗಾರರು ಹಾಗೂ ಛಾಯಾಗ್ರಾಹಕರಿಂದ ರಕ್ತದಾನ ಹಾಗೂ ನೇತ್ರದಾನವನ್ನ ಮಾಡುತ್ತಿದ್ದಾರೆ.
ಅದರಂತೆ ಅಪ್ಪು ಅಭಿಮಾನಿಗಳಿಗೆ ಊಟ ಬಡಿಸಿ, ಡಾ.ಶಿವರಾಜ್ಕುಮಾರ್ ನೇರವಾಗಿ ರಕ್ತದಾನ ನಡೆಯುತ್ತಿದ್ದ ಸ್ಥಳಕ್ಕೆ ಬಂದರು. ಅಲ್ಲಿ ತಾವೂ ಕೂಡ ರಕ್ತ ನೀಡಿದರು.