ಹಳಿ ದಾಟುವಾಗ ರೈಲಿನಡಿ ಸಿಲುಕಿದ ವೃದ್ಧ ಬದುಕಿದ್ದೇ ರೋಚಕ.. ಇಲ್ಲಿದೆ ವಿಡಿಯೋ..

ಹಳಿ ದಾಟುವಾಗ ರೈಲಿನಡಿ ಸಿಲುಕಿದ ವೃದ್ಧ ಬದುಕಿದ್ದೇ ರೋಚಕ.. ಇಲ್ಲಿದೆ ವಿಡಿಯೋ..

ಮುಂಬೈ: ವೃದ್ಧನೋರ್ವ ಚಲಿಸುವ ರೈಲಿಗೆ ಸಿಲುಕಿ ಇನ್ನೇನು ಸಾವನ್ನಪ್ಪಿ ದುರಂತವೇ ಸಂಭವಿಸಿತು ಎನ್ನುವಷ್ಟರಲ್ಲಿ ರೈಲ್ವೇ ಸಿಬ್ಬಂದಿ ತಮ್ಮ ಸಮಯ ಪ್ರಜ್ಞೆಯಿಂದ ವೃದ್ಧನ ಜೀವ ಉಳಿಸಿದ ಘಟನೆ ಮುಂಬೈ ಸೆಂಟ್ರಲ್​ನಲ್ಲಿ ನಡೆದಿದೆ.

ವೃದ್ಧ ರೈಲ್ವೇ ಹಳಿ ದಾಟುವಾಗ ಇದ್ದಕ್ಕಿದ್ದಂತೆ ರೈಲು ಸ್ಟೇಷನ್​ಗೆ ಧಾವಿಸಿದೆ.. ಈ ವೇಳೆ ಸಿಬ್ಬಂದಿ ರೈಲು ಚಾಲನೆ ಮಾಡುತ್ತಿದ್ದ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಇದರಿಂದ ಎಚ್ಚೆತ್ತ ಸಿಬ್ಬಂದಿ ತಕ್ಷಣವೇ ಎಮರ್ಜೆನ್ಸಿ ಬ್ರೇಕ್ ಒತ್ತಿದ್ದಾರೆ. ಎಮರ್ಜೆನ್ಸಿ ಬ್ರೇಕ್ ಒತ್ತಿದರಾದರೂ ಕೊನೇ ಕ್ಷಣದಲ್ಲಿ ವೃದ್ಧ ರೈಲಿನ ಇಂಜಿನ್ ಅಡಿಯಲ್ಲಿ ಸಿಲುಕಿದ್ದಾರೆ. ತಕ್ಷಣವೇ ಸೂಚನೆ ನೀಡಿದ್ದ ಎಲ್​ಪಿ ಎಸ್​.ಕೆ. ಪ್ರಧಾನ್ ಮತ್ತು ಎಎಲ್​ಪಿ ರವಿಶಂಕರ್ ಓಡಿಬಂದು ವೃದ್ಧನನ್ನ ಇಂಜಿನ್ನಿನ ಕೆಳಗೆ ಸಿಲುಕಿದ್ದ ವೃದ್ಧನನ್ನ ಹೊರಗೆಳೆದಿದ್ದಾರೆ.

ವೃದ್ಧನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಸಮಯಪ್ರಜ್ಞೆಯಿಂದ ವೃದ್ಧನ ಜೀವ ಉಳಿಸಿದ ಇಬ್ಬರೂ ಸಿಬ್ಬಂದಿಗೆ ಕೇಂದ್ರ ರಲ್ವೆಯ ಜನರಲ್ ಮ್ಯಾನೇಜರ್ ಸ್ಥಳದಲ್ಲೇ ತಲಾ 2 ಸಾವಿರ ಬಹುಮಾನ ನೀಡಿದ್ದಾರೆ.

The post ಹಳಿ ದಾಟುವಾಗ ರೈಲಿನಡಿ ಸಿಲುಕಿದ ವೃದ್ಧ ಬದುಕಿದ್ದೇ ರೋಚಕ.. ಇಲ್ಲಿದೆ ವಿಡಿಯೋ.. appeared first on News First Kannada.

Source: newsfirstlive.com

Source link