ಹ್ಯಾಂಡ್ ಗ್ರಾನೈಡ್
ಹಾವೇರಿ: ಹಳೆಯ ಕಾಲದ್ದು ಎನ್ನಲಾದ ಹ್ಯಾಂಡ್ ಗ್ರಾನೈಡ್(Hand Granide) ಹಾವೇರಿ ನಗರದ ನೇತಾಜಿ ನಗರದಲ್ಲಿ ಪತ್ತೆಯಾಗಿದೆ. ಮನೆ (Home) ಕಟ್ಟುವ ಸಲುವಾಗಿ ಖಾಲಿ ಜಾಗವನ್ನು ಸ್ವಚ್ಛ ಮಾಡುವಾಗ ತುಕ್ಕು ಹಿಡಿದ ಸ್ಥಿತಿಯಲ್ಲಿ ಹ್ಯಾಂಡ್ ಗ್ರಾನೈಡ್ ಪತ್ತೆಯಾಗಿದೆ. ಹ್ಯಾಂಡ್ ಗ್ರಾನೈಡ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು (Karnataka police) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರವಿ ಮುಷ್ಠಿ ಎಂಬುವವರಿಗೆ ಸೇರಿದ ಜಾಗದಲ್ಲಿ ಹ್ಯಾಂಡ್ ಗ್ರಾನೈಡ್ ಪತ್ತೆಯಾಗಿದೆ.
ದೊಂಬಿ ನಡೆದಾಗ, ಪೊಲೀಸರು, ಯುದ್ಧದ ಸಂದರ್ಭದಲ್ಲಿ ಬಳಸಲಾಗುವ ಹ್ಯಾಂಡ್ ಗ್ರಾನೈಡ್ ಇದಾಗಿತ್ತು ಎಂದು ಸದ್ಯ ಮೂಲಗಳು ತಿಳಿಸಿವೆ. ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುವುದಾಗಿ ಎಸ್.ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.