ಬೆಂಗಳೂರು: ಗೆಸ್ಟ್ ಹೌಸ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯೂಸ್​ ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎ. ಹೆಚ್ ಡಿ ಕುಮಾರಸ್ವಾಮಿ ..  ನಾನು ಆ ಗೆಸ್ಟ್​ ಹೌಸ್​ಗೆ 4 ರಿಂದ 5 ವರ್ಷಗಳಿಂದ ಹೋಗುತ್ತಲೇ ಇಲ್ಲ. ಹಿಂದೆ ಏನೇನು ನಡೆದಿದೆ ಎಂದು ಹೇಳಲಾಗಲ್ಲ. ಸತ್ಯವಂತರು ಉತ್ತಮರು ಇದ್ದರೆ ಚರ್ಚೆ ಮಾಡಬಹುದು ಎಂದು ಹೇಳುವ ಮೂಲಕ ಜಮೀರ್ ಅಹ್ಮದ್​ಗೆ ತಿರುಗೇಟು ನೀಡಿದ್ದಾರೆ.

ಭೋಜೇಗೌಡರಿಗೆ ನಾನು ನನಗೆ ಗೆಸ್ಟ್​ಹೌಸ್​ನ ಅವಶ್ಯಕತೆ ಇಲ್ಲ ಎಂದು ಹಿಂದೆಯೇ ಹೇಳಿದ್ದೇನೆ. 3 ವರ್ಷದಿಂದ ಸಿನಿಮಾ ಹುಡುಗರು ಆ ಗೆಸ್ಟ್​ ಹೌಸ್​ನಲ್ಲಿ ಇದ್ದಾರೆ. ಅದರಲ್ಲಿ ಕೆಲವು ಕಾಸ್ಟ್​ಲೀ ಐಟಮ್​ಗಳು ಇದಾವೆ.. ಬೋಜೇಗೌಡರಿಗೆ ಅಲ್ಲಿರುವ ಸಾಮಾನು ತರುವಂತೆ ಹೇಳಿದ್ದೆ. ನಮ್ಮ ಹುಡುಗರು ಮೆಟಿರಿಯಲ್ ತರಲು ಹೋದಾಗ ಹೀಗೆ ಗಲಾಟೆ ಮಾಡಿರಬಹುದು. ಹಿಂದೆ ಇದ್ದ ಕೆಟ್ಟ ಅಭ್ಯಾಸ ಬಿಟ್ಟು ನಾನು ತೋಟದ ಕೆಲಸ ಮಾಡಿಕೊಂಡು ಇದ್ದೇನೆ. ಇವತ್ತು ನಾನು ನನ್ನ ತೋಟದಲ್ಲಿ ಕೆಲಸ ಮಾಡ್ತಿದ್ದೇನೆ. ಈಗ ನನಗೆ ವಿಷಯ ಗೊತ್ತಾಗಿದೆ. ನಾವ್ಯಾರು ದರೋಡೆ ಮಾಡೋಕೆ ಹೋಗಿಲ್ಲ. ಅವರೆಲ್ಲ ಬೆಳೆದು ದೊಡ್ಡವರಾಗಿದ್ದಾರೆ. ಮನುಷ್ಯನ ನಾಲಿಗೆ ಏನು ಬೇಕಾದ್ರೂ ನುಡಿಸುತ್ತೆ.. ಅಂಥವರಿಗೆ ಉತ್ತರ ಕೊಟ್ಟು ಏನೂ ಪ್ರಯೋಜನ ಇಲ್ಲ ಎಂದು ಜಮೀರ್ ವಿರುದ್ಧ ಕಿಡಿಕಾರಿದರು.

The post ಹಳೇ ಕೆಟ್ಟ ಅಭ್ಯಾಸ ಎಲ್ಲಾ ಬಿಟ್ಟು ತೋಟದ ಮನೆ ಸೇರ್ಕೊಂಡಿದ್ದೀನಿ: ಜಮೀರ್​ಗೆ ಹೆಚ್​ಡಿಕೆ ತಿರುಗೇಟು appeared first on News First Kannada.

Source: newsfirstlive.com

Source link