ಹಳೇ ಮೈಸೂರು ಭಾಗದ ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ ಅಮಿತ್ ಶಾ ಅವರ ಭಾಷಣದಿಂದಲೇ ಆರಂಭಗೊಂಡಿದ್ದು, ಅವರ ಭಾಷಣದಿಂದಲೇ ಸಭೆ ಅಂತ್ಯವಾಗಿದೆ. ಈ ವೇಳೆ ಹಳೇ ಮೈಸೂರು ಭಾಗದ ನಾಯಕರಿಗೆ ಹಲವು ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಕೆಲ ಟಾಸ್ಕ್ ಕೊಟ್ಟಿದ್ದಾರೆ.

ಬಿಜೆಪಿ ನಾಯಕರೊಂದಿಗೆ ಅಮಿತ್ ಶಾ ಸಭೆ
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಕರ್ನಾಟಕ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಇಂದು(ಡಿಸೆಂಬರ್ 30) ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಹಳೇ ಮೈಸೂರು ಭಾಗದ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿದರು, ಸುಮಾರು 2 ಗಂಟೆಗಳ ಕಾಲ ಸಭೆಯಲ್ಲಿ ಅಮಿತ್ ಶಾ, ನಾಯಕರಿಗೆ ಕೆಲ ಖಡಕ್ ಸೂಚನೆಗಳೊಂದಿಗೆ ಕೆಲ ಟಾಸ್ಕ್ ಕೊಟ್ಟಿದ್ದಾರೆ.