ಹುಬ್ಬಳ್ಳಿ: ಹಳ್ಳಿಗಳಲ್ಲಿ ಕೊರೊನಾ ಅಟ್ಟಹಾಸವನ್ನ ಮೆರೆಯುತ್ತಿದ್ದರೂ ಸಹ ಹಳ್ಳಿ ಜನ ಮಾತ್ರ ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.

ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಜನರು ಪಡಿತರ ಅಕ್ಕಿಯನ್ನ ಪಡೆಯಲು ಸಾಮಾಜಿಕ ಅಂತರವನ್ನೇ ಮರೆತು ಗುಂಪು ಗುಂಪಾಗಿ ಖರೀದಿಗೆ ಮುಂದಾಗಿದ್ದಾರೆ. ಮಾಸ್ಕ್ ಧರಿಸದೇ ಪಡಿತರ ಅಕ್ಕಿಯನ್ನ ಪಡೆಯಲು ಜನ ಈ ರೀತಿಯಾಗಿ ವರ್ತಿಸಿದ್ದು ಸದ್ಯ ಕೊರೊನಾ ಆತಂಕ ಮತ್ತಷ್ಟು ಹೆಚ್ಚಿಸಿದೆ.

ಮೊದಲೇ ಕೋವಿಡ್ ಹಳ್ಳಿಗಳಲ್ಲಿ ತಾಂಡವವಾಡುತ್ತಿದ್ದು, ಇಂತಹ ವೇಳೆಯಲ್ಲಿ ಸ್ಥಳೀಯ ಮಟ್ಟದ ಅಧಿಕಾರಿಗಳು ಪಡಿತರವನ್ನ ನೀಡಲು ಯಾವುದೇ ನಿಯಮ ಜಾರಿ ತರದೆ ಹೀಗೆ ಅಂಗಡಿ ತೆರೆದಿದ್ದೇ ಜನರ ಗುಂಪಿಗೆ ಪ್ರಮುಖ ಕಾರಣ ಎನ್ನಲಾಗಿದೆ.

The post ಹಳ್ಳಿಗಳಲ್ಲಿ ಕೊರೊನಾ ಅಬ್ಬರ ಜೋರಾಗಿದ್ದರೂ ಪಡಿತರ ಪಡೆಯಲು ಮುಗಿಬಿದ್ದ ಜನ appeared first on News First Kannada.

Source: newsfirstlive.com

Source link