ಹಳ್ಳಿಗಳಲ್ಲಿ ಬೀದಿದೀಪ ಹಾಳಾದರೂ ಬಲ್ಬ್ ಹಾಕೋದು ಮೋದಿ ಸರ್ಕಾರ -ಸಂಸದ ಪ್ರತಾಪ್ ಸಿಂಹ


ಮೈಸೂರು: ಗ್ರಾಮ ಪಂಚಾಯಿತಿಗಳು ನಡೆಯುತ್ತಿರುವುದು ಮೋದಿ ಸರ್ಕಾರದಿಂದ, ಹಳ್ಳಿಗಳಲ್ಲಿ ಬೀದಿದೀಪ ಹಾಳಾದರೆ ಬಲ್ಬ್ ಹಾಕುವುದು ನರೇಂದ್ರ ಮೋದಿ ಸರ್ಕಾರ ಅಂತಾ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘು ಕೌಟಿಲ್ಯ ಪರ ಪ್ರಚಾರ ಮಾಡುತ್ತಿರುವ ಸಂಸದ ಪ್ರತಾಪ್​ ಸಿಂಹ ಪ್ರಧಾನಿ ಮೋದಿಯವರ ಗುಣಗಾನ ಮಾಡಿದ್ದಾರೆ. ನಗರದ ರಾಜೇಂದ್ರ ಕಲಾಮಂದಿರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳ ಅಭ್ಯುದಯಕ್ಕೆ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು.

ನಮ್ಮದೇ ಸರ್ಕಾರ ರಾಜ್ಯದಲ್ಲಿದ್ದರೂ ನಾನು ಇದನ್ನು ಹೇಳುತ್ತಿದ್ದೇನೆ. ಗ್ರಾಮದಲ್ಲಿ ಬೀದಿ ದೀಪ ಹಾಳದರೆ ಬಲ್ಬ್ ಹಾಕೋದು ನರೇಂದ್ರ ಮೋದಿ ಸರ್ಕಾರ. ಜಲ ಜೀವನ್ ಮಿಷನ್ ಮೂಲಕ ಮನೆಗಳಿಗೆ ನೀರು ಕೊಡೋದು ಮೋದಿ ಸರ್ಕಾರ. ಯಡಿಯೂರಪ್ಪನವರೂ ಕೂಡಾ ಹಲವು ಯೋಜನೆಗಳನ್ನ ಜಾರಿಗೆ ತಂದರು. ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ಮಹತ್ತರ ಯೋಜನೆ ಜಾರಿಗೆ ತಂದ್ರು. ಅದೇ ರೀತಿಯಲ್ಲಿ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

The post ಹಳ್ಳಿಗಳಲ್ಲಿ ಬೀದಿದೀಪ ಹಾಳಾದರೂ ಬಲ್ಬ್ ಹಾಕೋದು ಮೋದಿ ಸರ್ಕಾರ -ಸಂಸದ ಪ್ರತಾಪ್ ಸಿಂಹ appeared first on News First Kannada.

News First Live Kannada


Leave a Reply

Your email address will not be published. Required fields are marked *