ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಂತರ ಬ್ಲಾಕ್ ಫಂಗಸ್ ಕೇಸ್ ಜಾಸ್ತಿ ಆಗ್ತಿದ್ದು ಸೂಕ್ತ ನಿರ್ವಹಣೆ ಸಂಬಂಧ ಸಲ್ಲಿಕೆಯಾಗಿರುವ ಪಿಐಎಲ್​ಗಳ ವಿಚಾರಣೆ ಇಂದು ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ನಡೆದಿದೆ.

ಸಿಜೆ ಎ.ಎಸ್ ಓಕಾ & ಮತ್ತು ನ್ಯಾ. ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆದಿದ್ದು.. ಬ್ಲಾಕ್ ಫಂಗಸ್ ಪ್ರಕರಣಗಳ ಪತ್ತೆ ಮಾಡಲು ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿಗಳ ಬಿಡುಗಡೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ತಕ್ಷಣ ಕ್ರಮ ತೆಗೆದುಕೊಳ್ಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.

ಇನ್ನು ನಿರ್ವಹಣೆ & ಚಿಕಿತ್ಸೆ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜೂನ್ 9 ರಂದು ಹೊರಡಿಸಿರುವ ಮಾರ್ಗಸೂಚಿಯನ್ನ ರಾಜ್ಯದ ಎಲ್ಲಾ ಆಸ್ಪತ್ರೆಗೆ ತಲುಪಿಸಬೇಕು. ಬ್ಲಾಕ್ ಫಂಗಸ್​ಗೆ ಔಷಧ ಪೂರೈಸಲು ರಾಜ್ಯ ಸರ್ಕಾರ ನಿಯಮಿತವಾಗಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು. ಹಾಗೆಯೇ, ಕೇಂದ್ರ ಸರ್ಕಾರ ಬೇಡಿಕೆ ತಕ್ಕಂತೆ ಔಷಧ ಹಂಚಿಕೆ ಮಾಡಬೇಕು. ಬ್ಲಾಕ್ ಫಂಗಸ್ ಪ್ರಕರಣ ಅಂಕಿ-ಅಂಶಗಳನ್ನು ಸಲ್ಲಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

The post ಹಳ್ಳಿಗಳಲ್ಲಿ ಬ್ಲಾಕ್​ ಫಂಗಸ್ ಹೆಚ್ಚುತ್ತಿದೆ.. ತಕ್ಷಣ ಕ್ರಮ ತೆಗೆದುಕೊಳ್ಬೇಕು- ಹೈಕೋರ್ಟ್ ಸೂಚನೆ appeared first on News First Kannada.

Source: newsfirstlive.com

Source link