ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕೊರೊನಾ ಹೆಚ್ಚಳವಾಗ್ತಿರೋ ಹಿನ್ನೆಲೆ, ಗ್ರಾಮ‌ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಮಾಡಲು ತೀರ್ಮಾನ ಮಾಡಲಾಗಿದೆ ಅಂತ ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಮೈಕ್ರೋ ಕಂಟೈನ್ಮೆಂಟ್ ಝೋನ್ ಲೆವೆಲ್​​ನಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ‌. ಒಂದು ಸಮಿತಿ ರಚನೆ ಮಾಡುತ್ತೇವೆ‌‌‌, ಅದ್ರಲ್ಲಿ ಸ್ಥಳೀಯ ಪೊಲೀಸರು  ಹಾಗೂ ಸ್ಥಳೀಯ ಅಧಿಕಾರಿಗಳು ಇರ್ತಾರೆ‌. ಸೋಂಕಿತರಿಗೆ ಔಷಧ ವಿತರಣೆ ಮಾಡಲು ಮತ್ತು ಸೋಂಕು ಹರಡದಂತೆ ನಿಗಾ ವಹಿಸಲು ಈ ಸಮಿತಿ ಕೆಲಸ ಮಾಡಲಿದೆ ಎಂದು ಹೇಳಿದರು.

ಸೋಂಕಿತ ಮಕ್ಕಳಿಗೆ ವಿಶೇಷ ವಾರ್ಡ್​
ಲಾಕ್ ಡೌನ್ ಮತ್ತು ಕೆಲ ಒಡಾಟಗಳಿಗೆ ನಿರ್ಬಂಧ ವಿಧಿಸಲು ಸ್ಥಳೀಯ ಆಡಳಿತಕ್ಕೆ ಹೊಣೆ ನೀಡಲಾಗಿದೆ. ಇಂದು ಸಂಜೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ವೇಳೆ ಕೋವಿಡ್​ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲದೇ ಕಪ್ಪು ಫಂಗಸ್ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ಫಂಗಸ್ ಸಂಬಂಧ ನಿನ್ನೆ ಕೇಂದ್ರ ಸಚಿವ ಸದಾನಂದಗೌಡರ ಜೊತೆ ಚರ್ಚೆ ಮಾಡಲಾಗಿದೆ. ಅವರು 1000ಕ್ಕೂ ಹೆಚ್ಚು ಇಂಜೆಕ್ಷನ್ ಕೊಡುವ ಬಗ್ಗೆ ಭರವಸೆ ನೀಡಿದ್ದಾರೆ. ಇನ್ನು ಮಕ್ಕಳಿಗೆ ಸೋಂಕು ತಗುಲಿದ್ರೆ ಜಿಲ್ಲೆಗಳಲ್ಲಿ ಅವರಿಗಾಗಿ ವಿಶೇಷ ವಾರ್ಡ್ ಹಾಗೂ ಐಸಿಯು ಬೆಡ್ ವ್ಯವಸ್ಥೆ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

 

The post ‘ಹಳ್ಳಿಗಳಲ್ಲಿ ಮೈಕ್ರೋ ಕಂಟೈನ್​ಮೆಂಟ್​ ಝೋನ್, ಸೋಂಕಿತ ಮಕ್ಕಳಿಗೆ ವಿಶೇಷ ವಾರ್ಡ್​’ appeared first on News First Kannada.

Source: newsfirstlive.com

Source link