ಹುಬ್ಬಳ್ಳಿ: ಕೊರೊನಾ ವೈರಸ್ ಹಳ್ಳಿಗಳಲ್ಲಿ ದಾಂಗುಡಿ ಇಟ್ಟಿದೆ. ಅಮಾಯಕ ಹಳ್ಳಿಜನ ಕೊರೊನಾ ಸೃಷ್ಠಿಸಿದ ಅವಾಂತರಕ್ಕೆ ಹೈರಾಣಾಗಿದ್ದಾರೆ. ಹಳ್ಳಿಗಳಲ್ಲಿರುವ ಮೂಢನಂಬಿಕೆ, ಅನಕ್ಷರತೆ ಅಮಾಯಕತೆ ಮಾನವೀಯತೆಗಳು ಕೊರೊನಾ ವ್ಯಾಪಕವಾಗಿ ಹಬ್ಬಲು ಪ್ರಮುಖ ಕಾರಣ. ಸದ್ಯದ ಹಳ್ಳಿಗಳ ಸ್ಥಿತಿಗತಿ ಹೇಗಿದೆ, ಕೊರೊನಾದಿಂದ ಬಚಾವ್ ಆಗಲು ಜನ ಏನು ಮಾಡಬಹುದು ಹಾಗೂ ಸರಕಾರ ಏನು ಮಾಡಬೇಕು ಅನ್ನೋದನ್ನ ನ್ಯೂಸ್ ಫಸ್ಟ್ ಗ್ರೌಂಡ್ ರಿಯಾಲಿಟಿ ಚೆಕ್ ಮೂಲಕ ಸಂಗ್ರಹಿಸಿದೆ

ಹಳ್ಳಿಗಳ ಸ್ಥಿತಿಗತಿ

1) ಬಹುತೇಕ ಹಳ್ಳಿಗಳಲ್ಲಿ ಕೊರೊನಾ ಅಟ್ಟಹಾಸ
2) ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿರುವ ಹಳ್ಳಿಗರು
3) ಹಳ್ಳಿಗಳಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿತರ ಸಾವು
4) ಪಟ್ಟಣಗಳಲ್ಲಿ ಲಾಕ್ ಡೌನ್ ಇದ್ರೂ ಹಳ್ಳಿಗಳು ಖುಲ್ಲಂಖುಲ್ಲಾ
5) ಕೊರೊನಾಕ್ಕೆ ಭಯಗೊಂಡಿರುವ ಹಳ್ಳಿ ಜನ
6) ಕೊರೊನಾ ಒಕ್ಕರಿಸಿದರೂ ಮುಂಜಾಗ್ರತೆ ಇಲ್ಲ
7) ಹಳ್ಳಿಯಿಂದ ವೈದ್ಯಕೀಯ ಸೌಲಭ್ಯ ದೂರ
8) ಸೋಂಕಿತರಿಗೆ ಸಿಕ್ಕುತ್ತಿಲ್ಲ ಸರಿಯಾದ ಚಿಕಿತ್ಸೆ
9) ಹಾಸಿಗೆ ಹಿಡಿದರೂ ಯಾವುದೋ ಮಾತ್ರ ತಿಂದು ಸುಮ್ಮನಾಗುತ್ತಿರುವ ಜನ
10) ನಕಲಿ ವೈದ್ಯರೇ ಹಳ್ಳಿಗರ ಪಾಲಿಗೆ ದೇವರು
11) ಪಂಚಾಯತಿಗಳಿಂದ ಕಾಟಾಚಾರದ ಜಾಗೃತಿ
12) ಪಾಸಿಟಿವ್ ಇರೋರು ಊರೆಲ್ಲಾ ಸುತ್ತುತ್ತಿದ್ದಾರೆ
13) ಕೊರೊನಾ ಟೆಸ್ಟ್ ಗೆ ಮುಂದಾಗದ ಸೋಂಕಿತರು
14) ಗುಳೆಯಿಂದ ವಾಪಸ್ ಬಂದವರಿಂದ ಹೆಚ್ಚಿದ ಸೋಂಕು
15) ದೊಡ್ಡಾಸ್ಪತ್ರೆಗಳಿಗೆ ತೆರಳಲು ಭಯಬೀಳುತ್ತಿರುವ ಜನ
16) ಅರ್ಧಕ್ಕರ್ಧ ಹಳ್ಳಿ ಸೋಂಕಿತರಿಂದ ತುಂಬಿದ್ದರೂ ಮಾಸ್ಕ್ ಹಾಕಿಕೊಳ್ಳದ ಜನ
17) ಆರೋಗ್ಯ ಇಲಾಖೆಯಿಂದಲೂ ನಿಷ್ಕಾಳಜಿ
18) ಜನಕ್ಕೆ ತಿಳುವಳಿಕೆ ನೀಡದ ಆಶಾ ಕಾರ್ಯಕರ್ತೆಯರು
19) ಕೆಲವಡೆ ತಿಳುವಳಿಕೆ ನೀಡಿದರು ಜನ ಪಾಲಿಸುತ್ತಿಲ್ಲ
20) ಜಿಲ್ಲಾಡಳಿತಗಳು ಪಟ್ಟಣಗಳಿಗೆ ನೀಡಿದಷ್ಟು ಹಳ್ಳಿಗಳಿಗೆ ಮಹತ್ವ ನೀಡುತ್ತಿಲ್ಲ

ಸರಕಾರ ಏನು ಮಾಡಬಹುದು?

1) ಕೋವಿಡ್ ನಿಯಮ ಪಾಲಿಸಲು ಕಟ್ಟುನಿಟ್ಟಿನ ಆದೇಶ
2) ವೈದ್ಯಕೀಯ ಸೌಲಭ್ಯದಲ್ಲಿ ಹೆಚ್ಚಳ
3) ಔಷಧೋಪಚಾರಕ್ಕೆ ಹೆಚ್ಚಿನ ಒತ್ತು ನೀಡುವುದು
4) ಆಶಾ ಕಾರ್ಯಕರ್ತೆಯರನ್ನು ಸಮರ್ಥವಾಗಿ ಬಳಸಿಕೊಳ್ಳುವದು
5) ಪಂಚಾಯತಿಗಳ ಹೊಣೆ ಹೆಚ್ಚಿಸುವುದು
6) ಹಳ್ಳಿಗರಲ್ಲಿ ಜಾಗೃತಿ ಹೆಚ್ಚಿಸುವುದು
7) ಸೋಂಕಿತರು ಅಲೆದಾಡಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವುದು
8) ಶಂಕಿತ ಸೋಂಕಿತರನ್ನೂ ಮನೆಯಲ್ಲಿರುವಂತೆ ಕಟ್ಟುನಿಟ್ಟುಗೊಳಿಸುವುದು
9) ಮಾಸ್ಕ್ ಇಲ್ಲದವರಿಗೆ ಪಂಚಾಯತಿಯಿಂದ ಕ್ರಮ ಕೈಗೊಳ್ಳಲು ಆದೇಶಿಸುವುದು
10) ಪಂಚಾಯತಿ ಮಟ್ಟದಲ್ಲಿ ಕೋವಿಡ್ ಟೆಸ್ಟ್ ಸೆಂಟರ್ ಓಪನ್ ಮಾಡುವುದು
11) ಆಶಾ ಕಾರ್ಯಕರ್ತೆಯರಿಂದ RAT ಪರೀಕ್ಷೆ ಮಾಡಿಸುವುದು
12) ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರನ್ನು ಕೋವಿಡ್ ಕೆಲಸದಲ್ಲಿ ತೊಡಗಿಸಿಕೊಳ್ಳುವುದು
13) ಪಂಚಾಯತಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವುದು
14) ತಜ್ಞ ವೈದ್ಯರಿಂದ ಚಿಕತ್ಸೆ ಕೊಡಿಸುವುದು
15) ಲಾಕ್ ಡೌನ್ ಸಾಧ್ಯವಾಗದಿದ್ದರೂ ಸೆಮಿ ಲಾಕ್ ಡೌನ್ ಜಾರಿಗೊಳಿಸುವದು
16) ಆ್ಯಂಬುಲೆನ್ಸ್ ಸೇವೆ ಹೆಚ್ಚಿಸುವುದು
17) ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುವುದು
18) ಮದುವೆ, ಧಾರ್ಮಿಕ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿಷೇಧಿಸುವುದು
19) ಮೂಢನಂಬಿಕೆಗಳನ್ನು ಹೋಗಲಾಡಿಸುವಲ್ಲಿ ಕ್ರಮ ಕೈಗೊಳ್ಳುವುದು
20) ವ್ಯಾಕ್ಸಿನ್ ತಪ್ಪುತಿಳುವಳಿಕೆಯನ್ನು ನಿವಾರಿಸುವುದು

ಜನ ಏನು ಮಾಡಬಹುದು?

1) ಜ್ವರ, ಕೆಮ್ಮು, ಶೀತ, ಮೈಕೈ ನೋವು, ವಾಸನೆ ಹೀನತೆ, ರುಚಿಗೆಡುವದು, ಎದೆಬಿಗಿತ, ಉಸಿರಾಟದಲ್ಲಿ ತೊಂದರೆಯಂತಹ ಲಕ್ಷಣಗಳು ಕಾಣಿಸಿದರೆ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿಯಾಗುವುದು
2) ಕೊರೊನಾ ಲಕ್ಷಣಗಳಿದ್ದವರು ಕಡ್ಡಾಯವಾಗಿ 14 ದಿನ ಇತರರಿಂದ ದೂರ ಇರುವುದು
3) ನಕಲಿ ವೈದ್ಯರ ಮೊರೆ ಹೋಗುವುದನ್ನು ತಪ್ಪಿಸುವುದು
4) ನೇರವಾಗಿ ಗದ್ದೆಗಳ ಕೆಲಸಕ್ಕೆ ಹೋಗಿ ವಾಪಸ್ ನೇರವಾಗಿ ಮನೆಗೆ ಬರುವುದು
5) ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳುವುದು
6) ಒಬ್ಬರಿಂದ ಕನಿಷ್ಠ 6 ಅಡಿ ದೂರದಲ್ಲಿ ನಿಲ್ಲುವುದು, ಸಂಚರಿಸುವುದು
7) ಪೇಟೆಗಳಿಗೆ ಹೋಗುವುದನ್ನು ಆದಷ್ಟು ತಪ್ಪಿಸಿಕೊಳ್ಳುವುದು
8) ವಲಸೆ ಬಂದವರ ಬಗ್ಗೆ ಜಾಗೃತರಾಗಿರುವುದು
9) ಪಂಚಾಯತಿ, ಆರೋಗ್ಯ ಅಧಿಕಾರಿಗಳಿಗೆ ಆಶಾ ಕಾರ್ಯಕರ್ತೆಯರ ಸೂಚನೆಗಳಿಗೆ ಸ್ಪಂದಿಸುವುದು
10) ಯಾವದೇ ಭ್ರಮೆಗೆ ಒಳಗಾಗದೇ ವ್ಯಾಕ್ಸಿನ್ ಹಾಕಿಸಿಕೊಳ್ಳುವುದು
11) ಮೂಢನಂಬಿಕೆಗಳನ್ನು ಕೈಬಿಟ್ಟು ವೈಜ್ಞಾನಿಕವಾಗಿ ಯೋಚಿಸುವುದು
12) ಗುಂಪು ಗುಂಪಾಗಿ ಸಂಚರಿಸುವುದು, ಕೂಡುವುದನ್ನು ಬಿಡುವುದು
13) ಸೋಷಿಯಲ್ ಮೀಡಿಯಾದ ಸುಳ್ಳು ಸುದ್ಧಿಗಳನ್ನು ನಂಬದೇ ಇರುವುದು
14) ಮದುವೆ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡುವುದು
15) ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ನೀಡುವುದು
16) ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಜನ ಭಾಗವಹಿಸದೇ ಇರುವುದು
17) ಖಾಯಿಲೆ ಬಿದ್ದವರನ್ನು ನೋಡಲು ಹೋಗದೇ ಇರವುದು
18) ಗದ್ದೆ, ಫಾರ್ಮಹೌಸ್ ಗಳಲ್ಲಿನ ಪಾರ್ಟಿಗಳಿಂದ ದೂರ ಇರುವುದು
19) ಕಡ್ಡಾಯವಾಗಿ ಬಿಸಿನೀರು ಸೇವನೆ ಮಾಡುವುದು
20) ಬಿಸಿಯಾದ ಆಹಾರವನ್ನೇ ಸೇವಿಸುವುದು

ವಿಶೇಷ ವರದಿ: ಪ್ರಕಾಶ ನೂಲ್ವಿ, ನ್ಯೂಸ್ ಫಸ್ಟ್, ಹುಬ್ಬಳ್ಳಿ

The post ಹಳ್ಳಿಗಳಲ್ಲೂ ಕೊರೊನಾ ಕೇಕೆ: ಗಂಡಾಂತರದಿಂದ ಬಚಾವಾಗಲು ಜನರು ಹೀಗೆ ಮಾಡಲೇಬೇಕು appeared first on News First Kannada.

Source: newsfirstlive.com

Source link