ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮತ್ತೆ ಊರುಗಳಿಗೆ ಹೋಗಿದ್ದ ಹಳ್ಳಿ ಮಂದಿ ಬ್ಯಾಕ್​ ಟು ಬೆಂಗಳೂರು ಚಲೋ ಆರಂಭಿಸಿದ್ದಾರೆ.

ನಿನ್ನೆ ರಾಜ್ಯ ಸರ್ಕಾರ ಮುಂದಿನ ಸುಮವಾರದಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಅನ್​​ಲಾಕ್​​ ಘೋಷಣೆ ಮಾಡ್ತಿದ್ದಂತೆ ಹಳ್ಳಿಯ ಜನ ಬೆಂಗಳೂರಿನತ್ತ ಮುಖ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ 8ನೇ ಮೈಲಿ ಹಾಗೂ ಟಿ. ದಾಸರಳ್ಳಿ ಬಳಿ ಹೆಚ್ಚಿದ ವಾಹನ ದಟ್ಪನೆ ಹೆಚ್ಚಾಗಿದೆ.

ಲಾಕ್​ಡೌನ್ ಜಾರಿಯಾಗ್ತಿದ್ದಂತೆ ಜನರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಇದೀಗ ಅನ್​​ಲಾಕ್ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಮತ್ತೆ ಬೆಂಗಳೂರಿಗೆ ವಾಪಸ್ ಆಗ್ತಿದ್ದಾರೆ.


ಹೀಗಾಗಿ ನಿಧಾನಕ್ಕೆ ಸಹಜಸ್ಥಿಯತ್ತ ಬೆಂಗಳೂರು ಮರಳುತ್ತಿದ್ದು, ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದು ಟ್ರಾಫಿಕ್​ ಜಾಮ್ ಬಿಸಿಯಾಗಿದೆ. ಚಾಲುಕ್ಯ ಸರ್ಕಲ್, ಕಾರ್ಪೊರೇಷನ್, ಹೈಗ್ರೌಂಡ್ಸ್​, ರಾಜಭವನ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಆಗಿದೆ.

ಇದನ್ನೂ ಓದಿ: ಸೋಮವಾರದಿಂದ ರಾಜ್ಯ ಅನ್​ಲಾಕ್; ಪೊಲೀಸರ ಶುರುವಾಯ್ತು ಟೆನ್ಷನ್, ಟೆನ್ಷನ್

The post ಹಳ್ಳಿಯಿಂದ ‘ಬೆಂಗಳೂರು ಚಲೋ’ ಆರಂಭಿಸಿದ ಜನ.. ಫುಲ್ ಟ್ರಾಫಿಕ್ ಜಾಮ್ appeared first on News First Kannada.

Source: newsfirstlive.com

Source link

Leave a comment