ಹಳ್ಳಿ ಜೀವನ ನೆನೆದ ಸಂಯುಕ್ತಾ ಹೊರನಾಡು; ಅವರು ಗ್ರಾಮ ವಾಸ್ತವ್ಯ ಮಾಡಿದ್ದೇಕೆ? | Samyukta Hornad Talks about Bayaluseeme Kannada Movie


ಶೂಟಿಂಗ್ ಸಂದರ್ಭದಲ್ಲಿ ಸಂಯುಕ್ತಾ ಅವರು ಹಳ್ಳಿಯಲ್ಲೇ ಕಳೆದಿದ್ದಾರೆ. ಹಳ್ಳಿಯಲ್ಲಿ ಕಳೆದ ದಿನಗಳು ಹೇಗಿದ್ದವು ಎಂಬುದನ್ನು ಅವರು ಮೆಲುಕು ಹಾಕಿದ್ದಾರೆ.

[embed]https://www.youtube.com/watch?v=mPKYQjX2byA[/embed]

ನಟಿ ಸಂಯುಕ್ತಾ ಹೊರನಾಡು (Samyukta Hornad) ಸಿನಿಮಾ ವಿಚಾರದಲ್ಲಿ ತುಂಬಾನೇ ಚ್ಯೂಸಿ. ಪಾತ್ರ ಇಷ್ಟವಾದರೆ ಮಾತ್ರ ಅವರು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಈಗ ‘ಬಯಲುಸೀಮೆ’ ಹೆಸರಿನ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆದಿದೆ. ಹೆಸರೇ ಹೇಳುವಂತೆ ಇದೊಂದು ಉತ್ತರ ಕರ್ನಾಟಕ ಸೊಗಡಿನ ಸಿನಿಮಾ. ಈ ಸಿನಿಮಾದಲ್ಲಿ ಅಕ್ಕಮ್ಮ ಎಂಬ ಮುಗ್ಧ ಹುಡುಗಿಯ ಪಾತ್ರದಲ್ಲಿ ಸಂಯುಕ್ತಾ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಡೆದಿದೆ. ಶೂಟಿಂಗ್ ಸಂದರ್ಭದಲ್ಲಿ ಸಂಯುಕ್ತಾ ಅವರು ಹಳ್ಳಿಯಲ್ಲೇ ಕಳೆದಿದ್ದಾರೆ. ಹಳ್ಳಿಯಲ್ಲಿ ಕಳೆದ ದಿನಗಳು ಹೇಗಿದ್ದವು ಎಂಬುದನ್ನು ಅವರು ಮೆಲುಕು ಹಾಕಿದ್ದಾರೆ. ಅವರು ಚಿತ್ರದ ಬಗ್ಗೆ ಹಾಗೂ ಪಾತ್ರದ ಬಗ್ಗೆ ವಿವರಿಸಿದ ಮಾಹಿತಿ ಈ ವಿಡಿಯೋದಲ್ಲಿದೆ.


TV9 Kannada


Leave a Reply

Your email address will not be published.