ಹಳ್ಳ ಹಿಡಿದ ‘ಮನೆ ಬಾಗಿಲಿಗೆ ಶಾಲೆ ಯೋಜನೆ’: ಪಾಲಿಕೆಯ ಈ ಬಸ್​ಗಳು ಸ್ಮೋಕರ್​ಗಳ ಅಡ್ಡಾ!

ಹಳ್ಳ ಹಿಡಿದ ‘ಮನೆ ಬಾಗಿಲಿಗೆ ಶಾಲೆ ಯೋಜನೆ’: ಪಾಲಿಕೆಯ ಈ ಬಸ್​ಗಳು ಸ್ಮೋಕರ್​ಗಳ ಅಡ್ಡಾ!

ಬೆಂಗಳೂರು: ಈ ಹಿಂದೆ ಬಿಬಿಎಂಪಿ 50 ಲಕ್ಷ ವೆಚ್ಚದಲ್ಲಿ ಮನೆ ಬಾಗಿಲಿಗೆ ಶಾಲೆ ಯೋಜನೆ ಜಾರಿಗೆ ತರಲು ಮುಂದಾಗಿತ್ತು. ಸದ್ಯ ಯೋಜನೆ ಹಳ್ಳ ಹಿಡಿದಿದ್ದು ಮಕ್ಕಳು ಪಾಠ ಕಲಿಯಬೇಕಿದ್ದ ತಾಣ ಈಗ ಧೂಮಪಾನಿಗಳ ಅಡ್ಡಾ ಆಗಿದೆ. ಜೊತೆಗೆ ಇಲಿ ಹೆಗ್ಗಣಗಳಿಗೆ ವಾಸ ಸ್ಥಳವಾಗಿದೆ.

ಕಟ್ಟಡ ಕಾರ್ಮಿಕರ ಹಾಗೂ ಸ್ಲಮ್​ಗಳಲ್ಲಿನ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಅವರು ಇದ್ದಲ್ಲಿಗೇ ಹೋಗಿ ಪಾಠ ಕಲಿಸುವ ಯೋಜನೆ ಇದಾಗಿತ್ತು. ಇದಕ್ಕಾಗಿ ಒಂದು ಬಸ್ಸಿಗೆ ತಲಾ 5 ಲಕ್ಷದಂತೆ ಹಣ ಕೊಟ್ಟು ಬಿಎಂಟಿಸಿ ಬಸ್ಸುಗಳನ್ನ ಪಾಲಿಕೆ ಖರೀದಿ ಮಾಡಿತ್ತು. ಹಳೆ ಬಸ್ಸುಗಳನ್ನ ಶಾಲೆಗಳನ್ನಾಗಿ ಪರಿವರ್ತನೆ ಮಾಡಿ ಬಿಎಂಟಿಸಿ ಪಾಲಿಕೆ ಕೇಂದ್ರ ಕಚೇರಿಗೆ ತಂದು ನಿಲ್ಲಿಸಿದೆ. ಆದೆ ಕಳೆದ ಹಲವು ತಿಂಗಳುಗಳಿಂದ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲೇ ಬಸ್ಸುಗಳು ನಿಂತಿವೆ. ಇದರಿಂದ ಪಾಲಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಕೂಡ ಉದ್ಭವಿಸಿದೆ.

ಯೋಜನೆಯನ್ನ ಜಾರಿಗೆ ತರೋದಿರಲಿ ಕನಿಷ್ಠ ಬಸ್ಸುಗಳ ಡೋರ್​ಗಳನ್ನೂ ಸಹ ಕ್ಲೋಸ್ ಕೂಡ ಮಾಡಿಲ್ಲ.. ಈ ಹಿನ್ನೆಲೆ ರಾತ್ರಿಯಾದ್ರೆ ಸಾಕು ಇಲಿ ಹೆಗ್ಗಣಗಳು ವಾಸ ಮಾಡುತ್ತಾ ಬಸ್ಸುಗಳನ್ನ ಗಲೀಜು ಮಾಡುತ್ತಿವೆ.. ಮತ್ತೊಂದು ಕಡೆ ಧೂಮಪಾನಿಗಳು ಬಸ್ಸಿನ ಒಳಗಡೆ ಕೂತು ಧೂಮಪಾನ ಮಾಡುತ್ತಾ ಅಲ್ಲೇ ಸಿಗರೇಟ್ ತುಂಡು ಹಾಗೂ ಟೀ ಕುಡಿದು ಕಪ್ ಗಳನ್ನ ಹಾಕಿ ಹಾಳು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

The post ಹಳ್ಳ ಹಿಡಿದ ‘ಮನೆ ಬಾಗಿಲಿಗೆ ಶಾಲೆ ಯೋಜನೆ’: ಪಾಲಿಕೆಯ ಈ ಬಸ್​ಗಳು ಸ್ಮೋಕರ್​ಗಳ ಅಡ್ಡಾ! appeared first on News First Kannada.

Source: newsfirstlive.com

Source link