ಹವಾಮಾನ ಬದಲಾವಣೆಯು ನಮ್ಮ ನಿದ್ದೆಯ ಮೇಲೂ ನಕಾರಾಕ್ಮಕ ಪರಿಣಾಮ ಬೀರುತ್ತದೆ: ಅಧ್ಯಯನ ವರದಿ | Climate change negatively impact human sleep around the globe says Study


ಹವಾಮಾನ ಬದಲಾವಣೆಯು ನಮ್ಮ ನಿದ್ದೆಯ ಮೇಲೂ ನಕಾರಾಕ್ಮಕ ಪರಿಣಾಮ ಬೀರುತ್ತದೆ: ಅಧ್ಯಯನ ವರದಿ

ಪ್ರಾತಿನಿಧಿಕ ಚಿತ್ರ

Image Credit source: DNA

ತುಂಬಾ ಸೆಖೆ ಇರುವ ರಾತ್ರಿಗಳಲ್ಲಿ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು, ನಿದ್ರೆಯು ಸರಾಸರಿ 14 ನಿಮಿಷಗಳಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನವು ಸೂಚಿಸಿದೆ. ತಾಪಮಾನ ಹೆಚ್ಚಾದಂತೆ ಏಳು ಗಂಟೆಗಳಿಗಿಂತ ಕಡಿಮೆ…

ಅಧ್ಯಯನದ ಪ್ರಕಾರ ಹೆಚ್ಚುತ್ತಿರುವ ತಾಪಮಾನವು (temperatures)ಜಗತ್ತಿನಾದ್ಯಂತ ಮಾನವ ನಿದ್ರೆಯ (Sleep) ಮೇಲೆ ನಕಾರಾತ್ಮಕ  ಪರಿಣಾಮ ಬೀರುತ್ತದೆ. ಒನ್ ಅರ್ಥ್ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯ ಪ್ರಕಾರ 2099 ರ ವೇಳೆಗೆ ಸಬ್ ಆಪ್ಟಿಮಲ್ ತಾಪಮಾನವು ಪ್ರತಿ ವ್ಯಕ್ತಿ ವರ್ಷಕ್ಕೆ 50 ರಿಂದ 58 ಗಂಟೆಗಳ ನಿದ್ರೆಯನ್ನು ಕಳೆದುಕೊಳ್ಳಬಹುದು ಎಂದು ಸೂಚಿಸುತ್ತದೆ. ಕಡಿಮೆ ಆದಾಯದ ದೇಶಗಳ ನಿವಾಸಿಗಳು,ವಯಸ್ಸಾದವರು ಮತ್ತು ಮಹಿಳೆಯರಲ್ಲಿ ನಿದ್ರೆಯ ನಷ್ಟದ ಮೇಲೆ ತಾಪಮಾನದ ಪರಿಣಾಮವು ಗಣನೀಯವಾಗಿ ದೊಡ್ಡದಾಗಿದೆ ಎಂದು ಸಂಶೋಧಕರು ಕಂಡುಕೊಂಡಿರುವುದಾಗಿ ವರದಿ ಹೇಳಿದೆ. “ಮಾನವನ ಆರೋಗ್ಯ ಮತ್ತು ಉತ್ಪಾದಕತೆಗೆ ಅಗತ್ಯವಾದ ಚೈತನ್ಯಕಾರಿ ಪ್ರಕ್ರಿಯೆಯಾದ ನಿದ್ದೆ ಸೆಖೆಯಿಂದಾಗಿ ಕ್ಷೀಣಿಸಬಹುದು ಎಂದು ನಮ್ಮ ಫಲಿತಾಂಶಗಳು ಸೂಚಿಸುತ್ತವೆ ಎಂದು ಡೆನ್ಮಾರ್ಕ್‌ನ ಕೋಪನ್‌ಹೇಗನ್ ವಿಶ್ವವಿದ್ಯಾಲಯದ ಮುಖ್ಯ ಲೇಖಕ ಕೆಲ್ಟನ್ ಮೈನರ್ ಹೇಳಿದ್ದಾರೆ. ತಾಪಮಾನ ಏರಿಕೆಯು (Climate Change) ಸಾವುಗಳು ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಹೆಚ್ಚಿಸುತ್ತವೆ.ಅದೇ ವೇಳೆ ಮಾನವ ಕಾರ್ಯಕ್ಷಮತೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಬಹಳ ಹಿಂದಿನಿಂದಲೂ ತಿಳಿದುಬಂದಿದೆ.  ಆದರೆ ಈ ಪರಿಣಾಮಗಳ ಆಧಾರವಾಗಿರುವ ಜೈವಿಕ ಮತ್ತು ನಡವಳಿಕೆಯ ಕಾರ್ಯವಿಧಾನಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.  “ಈ ಅಧ್ಯಯನದಲ್ಲಿ ಸರಾಸರಿಗಿಂತ ಬೆಚ್ಚಗಿನ ತಾಪಮಾನವು ಮಾನವನ ನಿದ್ರೆಯನ್ನು ನಾಶಪಡಿಸುತ್ತದೆ ಎಂಬುದಕ್ಕೆ ನಾವು ಸಾಕ್ಷ್ಯವನ್ನು ಒದಗಿಸುತ್ತೇವೆ” ಎಂದು ಮೈನರ್ ಹೇಳಿದರು.

” ಜನರು ನಿದ್ರಿಸುವುದು ವಿಳಂಬವಾದಾಗ, ಸೆಖೆಯಿಂದಾಗಿ ಅವರು ನಿದ್ದೆ ಮಾಡಲಾಗದೆ ಎಚ್ಚರದಿಂದ ಇರುವ ಕಾರಣ  ಈ ರೀತಿ ನಿದ್ದೆ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಅಕ್ಸೆಲೆರೊಮೀಟರ್ ಆಧಾರಿತ ನಿದ್ರೆ-ಟ್ರ್ಯಾಕಿಂಗ್ ರಿಸ್ಟ್‌ಬ್ಯಾಂಡ್‌ಗಳಿಂದ ಸಂಗ್ರಹಿಸಲಾದ ಅನಾಮಧೇಯ ಜಾಗತಿಕ ನಿದ್ರೆ ಡೇಟಾವನ್ನು ಸಂಶೋಧಕರು ಬಳಸಿದ್ದಾರೆ. ಅಂಟಾರ್ಟಿಕಾವನ್ನು ಹೊರತುಪಡಿಸಿ ಎಲ್ಲಾ ಖಂಡಗಳನ್ನು ವ್ಯಾಪಿಸಿರುವ 68 ದೇಶಗಳಾದ್ಯಂತ 47,000 ಕ್ಕೂ ಹೆಚ್ಚು ವಯಸ್ಕರಿಂದ 7 ಮಿಲಿಯನ್ ರಾತ್ರಿಯ ನಿದ್ರೆಯ ದಾಖಲೆಗಳನ್ನು ಡೇಟಾ ಒಳಗೊಂಡಿದೆ. ಈ ಅಧ್ಯಯನದಲ್ಲಿ ಬಳಸಿದ ರಿಸ್ಟ್‌ಬ್ಯಾಂಡ್‌ಗಳ ಪ್ರಕಾರದ ಅಳತೆಗಳನ್ನು ಎಚ್ಚರ ಮತ್ತು ನಿದ್ದೆಯ ಕ್ರಮಗಳೊಂದಿಗೆ ಹೊಂದಿಸಲಾಗಿದೆ.

ತುಂಬಾ ಸೆಖೆ ಇರುವ ರಾತ್ರಿಗಳಲ್ಲಿ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು, ನಿದ್ರೆಯು ಸರಾಸರಿ 14 ನಿಮಿಷಗಳಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನವು ಸೂಚಿಸಿದೆ. ತಾಪಮಾನ ಹೆಚ್ಚಾದಂತೆ ಏಳು ಗಂಟೆಗಳಿಗಿಂತ ಕಡಿಮೆ ನಿದ್ರೆ ಪಡೆಯುವ ಸಾಧ್ಯತೆಯೂ ಹೆಚ್ಚಾಗುತ್ತದೆ. ನಮ್ಮ ದೇಹವು ಸ್ಥಿರವಾದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಹೆಚ್ಚು ಹೊಂದಿಕೊಳ್ಳುತ್ತದೆ, ಇದು ನಮ್ಮ ಬದುಕನ್ನ ಅವಲಂಬಿಸಿರುತ್ತದೆ” ಎಂದು ಮೈನರ್ ಹೇಳಿದ್ದಾರೆ. ನಮ್ಮ ದೇಹವು ಶಾಖವನ್ನು ವರ್ಗಾಯಿಸಲು, ಸುತ್ತಮುತ್ತಲಿನ ವಾತಾವರಣವು ನಮಗಿಂತ ತಂಪಾಗಿರಬೇಕು ಎಂದು ಸಂಶೋಧಕರು ಗಮನಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *