ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ​ ನನ್ನ ಹೆಂಡತಿ ಕಣ್ಣೆದುರು ಬಂದಿದ್ದಳು ಎಂದ ಬಾಲಿವುಡ್​ ನಟ | Aayush Sharma Fear to Shoot intimate Scene in Hone Laga


ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ​ ನನ್ನ ಹೆಂಡತಿ ಕಣ್ಣೆದುರು ಬಂದಿದ್ದಳು ಎಂದ ಬಾಲಿವುಡ್​ ನಟ

ಹೋನೆ ಲಗಾ ಹಾಡಿನ ದೃಶ್ಯ

‘ಅಂತಿಮ್​-ದಿ ಫೈನಲ್​ ಟ್ರುತ್​’ ( Antim: The Final Truth)ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ನವೆಂಬರ್​ 26ರಂದು ರಿಲೀಸ್​ ಆಗುತ್ತಿರುವ ಈ ಸಿನಿಮಾದಲ್ಲಿ ಖಡಕ್​ ಸಿಖ್​ ಪೊಲೀಸ್​ ಆಗಿ ಸಲ್ಮಾನ್​ ಖಾನ್ (Salman Khan)​ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಆಯುಷ್​​ ಶರ್ಮಾ (Aayush Sharma) ಗ್ಯಾಂಗ್​ಸ್ಟರ್​ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾದ ಹಾಡೊಂದರಲ್ಲಿ ಆಯುಷ್​ ಅವರು ಮಹಿಮಾ ಮುಕ್ವಾನಾ ಜತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳನ್ನು ಮಾಡುವಾಗ ತುಂಬಾನೇ ಭಯವಾಗಿತ್ತಂತೆ. ಅಲ್ಲದೆ, ಇದನ್ನು ನೋಡಿ ಕುಟುಂಬದವರು ಏನು ಹೇಳಬಹುದು ಎನ್ನುವ ಭಯವೂ ಅವರಿಗೆ ಕಾಡಿತ್ತು. ಈ ಬಗ್ಗೆ ಆಯುಷ್​ ಮಾಹಿತಿ ನೀಡಿದ್ದಾರೆ.

‘ಹೋನೆ ಲಗಾ..’ ಹಾಡಿನಲ್ಲಿ ಆಯುಷ್​ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇದನ್ನು ಶೂಟ್​ ಮಾಡೋದು ಅವರಿಗೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಅವರ ತಲೆಯಲ್ಲಿ ಸಾವಿರಾರು ಆಲೋಚನೆಗಳು ಮೂಡಿದ್ದವು. ಅವರ ಪತ್ನಿ ಅರ್ಪಿತಾ ಖಾನ್​ ಈ ಬಗ್ಗೆ ಏನು ಹೇಳಬಹುದು, ಮಕ್ಕಳಾದ ಆಹಿಲ್​ ಹಾಗೂ ಆಯತ್ ಈ ಬಗ್ಗೆ ಏನು ಯೋಚಿಸಬಹುದು ಎಂದು ಅವರು ಚಿಂತೆಗೆ ಒಳಗಾಗಿದ್ದರು.

‘ನಮ್ಮ ಸಿನಿಮಾದ ‘ಹೋನೆ ಲಗಾ..’ ಸಾಂಗ್​ ಚಿತ್ರೀಕರಣದಲ್ಲಿದ್ದಾಗ ನಾನು ಆಲೋಚಿಸುತ್ತಲೇ ಇದ್ದೆ. ಇದನ್ನು ಸ್ಕ್ರೀನ್‌ನಲ್ಲಿ ನಾನು ನೋಡಬಾರದು ಎಂದುಕೊಂಡೆ. ಇದನ್ನು ನನ್ನ ಹೆಂಡತಿ ವೀಕ್ಷಿಸುತ್ತಾಳೆ, ನನ್ನ ಮಕ್ಕಳು ನೋಡುತ್ತಾರೆ. ಆಗ ಏನಾಗಬಹುದು ಎನ್ನುವ ಯೋಚನೆ ಬಂತು. ಹೀಗೆ, ಸಾವಿರ ಆಲೋಚನೆಗಳು ತಲೆಯಲ್ಲಿ ಕೊರೆಯುತ್ತಲೇ ಇದ್ದವು. ಹಾಡಿನ ಶೂಟಿಂಗ್​ ವೇಳೆ ಹೆಂಡತಿ ಕಣ್ಣೆದುರು ಬರುತ್ತಿದ್ದಳು’ ಎಂದಿದ್ದಾರೆ ಆಯುಷ್.

ಮಹೇಶ್​ ಮಂಜ್ರೇಕರ್​ ಅವರು ‘ಅಂತಿಮ್​-ದಿ ಫೈನಲ್​ ಟ್ರುತ್​’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವರು ಆಯುಷ್​ ಅವರನ್ನು ಪ್ರ್ಯಾಂಕ್​ ಮಾಡಿದ್ದರು. ಈ ಸಿನಿಮಾದಲ್ಲಿ ಕಿಸ್ಸಿಂಗ್​ ದೃಶ್ಯ ಬರುತ್ತದೆ. ಅದನ್ನು ನಾನು​ ಮಾಡಬೇಕು ಎಂದು ಹೇಳಿದ್ದರು. ‘ನಾನು ಆ ದೃಶ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಆದರೆ ಚಿತ್ರಕ್ಕೆ ಅದರ ಅಗತ್ಯವಿದೆ ಎಂದು ಮಹೇಶ್​ ಪುನರುಚ್ಚರಿಸಿದರು. ಸರ್ ದಯವಿಟ್ಟು ಹಾಗೆ ಮಾಡಬೇಡಿ. ಇದೊಂದು ದರೋಡೆಕೋರರ ಚಿತ್ರ. ಇದರಲ್ಲಿ ಪ್ರೇಮಕಥೆ ಬರುವುದು ಬೇಡ ಎಂಬುದಾಗಿ ಬೇಡಿಕೊಂಡಿದ್ದೆ’ ಎಂದು ಶೂಟಿಂಗ್​ ಸಮಯವನ್ನು ನೆನಪಿಸಿಕೊಂಡಿದ್ದಾರೆ ಆಯುಷ್​.

ಜಾನ್​ ಅಬ್ರಾಹಂ ನಟನೆಯ ‘ಸತ್ಯಮೇವ ಜಯತೆ’ ಸಿನಿಮಾ ಹಿಟ್​ ಆಗಿತ್ತು. ಅದರ ಸೀಕ್ವೆಲ್​ ಆಗಿ ‘ಸತ್ಯಮೇವ ಜಯತೆ 2’ ತೆರೆಗೆ ಬರುತ್ತಿದೆ. ಈ ಚಿತ್ರವೂ ನವೆಂಬರ್​ 26ರಂದು ರಿಲೀಸ್​ ಆಗುತ್ತಿದೆ. ಈಗ ಅದೇ ದಿನ ಸಲ್ಲು ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ. ಹೀಗಾಗಿ, ಬಾಕ್ಸ್​ ಆಫೀಸ್​ನಲ್ಲಿ ಎರಡು ದೊಡ್ಡ ಬಜೆಟ್​ ಸಿನಿಮಾಗಳು ಮುಖಾಮುಖಿ ಆಗುತ್ತಿವೆ. ‘ಅಂತಿಮ್​-ದಿ ಫೈನಲ್​ ಟ್ರುತ್​’ ಸಿನಿಮಾ ದೀಪಾವಳಿಗೆ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾದ ಕೆಲ ದೃಶ್ಯಗಳನ್ನು ರೀಶೂಟ್​ ಮಾಡಲಾಗಿದೆ. ಇದರ ಎಡಿಟಿಂಗ್​ಗೆ ಹೆಚ್ಚು ಸಮಯ ಹಿಡಿದಿದೆ. ಹೀಗಾಗಿ, ನವೆಂಬರ್ 26ಕ್ಕೆ ಸಿನಿಮಾ ರಿಲೀಸ್​ ಆಗುತ್ತಿದೆ.

ಇದನ್ನೂ ಓದಿ: Antim Movie Trailer: ‘ಅಂತಿಮ್’​ ಟ್ರೇಲರ್​ನಲ್ಲಿ ಪೊಲೀಸ್​ ಆಗಿ ಮಿಂಚಿದ ಸಲ್ಮಾನ್​ ಖಾನ್​; ಸಲ್ಲು ಲುಕ್​ಗೆ ಫ್ಯಾನ್ಸ್​ ಫಿದಾ

 

TV9 Kannada


Leave a Reply

Your email address will not be published. Required fields are marked *