ಬಳ್ಳಾರಿ: ಬಳ್ಳಾರಿ ಟ್ರಾಫಿಕ್​ ಪೊಲೀಸರೊಬ್ಬರು ಸುಡು ಬಿಸಿಲಿನಲ್ಲಿ ಹಸುಗೂಸನ್ನ ಕರೆದೊಯ್ಯುತ್ತಿದ್ದ ಕುಟುಂಬಕ್ಕೆ ಆಟೋ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ASI ನಾಗಭೂಷಣ್​ ಮಾನವೀಯತೆ ಮೆರೆದ ಪೊಲೀಸ್​.

ಕೊರೊನಾ ಹೆಚ್ಚಾದ ಕಾರಣ ರಾಜ್ಯಸರ್ಕಾರ ವೀಕೆಂಡ್​ ಕರ್ಪ್ಯೂ ಜಾರಿ ಮಾಡಿದೆ. ಇಂದು ವಿಮ್ಸ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದ ಕುಟುಂಬವೊಂದು ಮೂರು ತಿಂಗಳ ಹಸುಗೂಸಿನೊಂದಿಗೆ ತಮ್ಮ ಗ್ರಾಮಕ್ಕೆ ಹೊರಟಿತ್ತು. ಬಸ್​ ಇಲ್ಲದ ಕಾರಣದಿಂದಾಗಿ 15 ಕಿಲೋ ಮೀಟರ್​ ದೂರವಿದ್ದ ಗ್ರಾಮಕ್ಕೆ ನಡೆದುಕೊಂಡೇ ಹೋಗುತ್ತಿದ್ದರು ಕುಟುಂಬದವರು ಎನ್ನಲಾಗಿದೆ. ಅದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗಭೂಷಣ್​​ ಇದನ್ನ ನೋಡಿದ್ದಾರೆ, ವಿಷಯ ತಿಳಿದು ಆ ಕುಟುಂಬಕ್ಕೆ ಆಟೋ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಆ ಆಟೋಗೆ ತಾವೇ ಹಣ ನೀಡಿದ್ದಾರೆ. ಟ್ರಾಫಿಕ್​ ಪೊಲೀಸರ ಈ ಕಾರ್ಯಕ್ಕೆ ಹಿರಿಯ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The post ಹಸುಗೂಸಿಗಾಗಿ ಆಟೋ ವ್ಯವಸ್ಥೆ; ಕರ್ತವ್ಯದ ವೇಳೆ ಮಾನವೀಯತೆ ಮೆರೆದ ಟ್ರಾಫಿಕ್​ ಪೊಲೀಸ್​ appeared first on News First Kannada.

Source: News First Kannada
Read More