ಉಡುಪಿ: ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡುವ ವೇಳೆ ಹಸುವೊಂದು ವಿದ್ಯಾರ್ಥಿಗಳ ಹಿಂದೆ ನಿಂತು ನಾಡ ಗೀತೆಗೆ ಗೌರವ ನೀಡಿದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.
ಉಡುಪಿಯ ಕುಂದಾಪುರದ ಮಾವಿನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ, ಶಾಲಾ ವಿದ್ಯಾರ್ಥಿಗಳು ಮುಂಜಾನೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಸಂದರ್ಭ ದೂರದಲ್ಲಿ ಮೇಯುತ್ತಿದ್ದ ಹಸು ಬಂದು ನಾಡಗೀತೆ ಮುಗಿಯುವವರೆಗೂ ವಿದ್ಯಾರ್ಥಿಗಳ ಹಿಂದೆ ನಿಂತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.