ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ನಟಿ ಕತ್ರಿನಾ ಕೈಫ್ ಜೋಡಿ ಮುಂದಿನ ತಿಂಗಳು ಹಸೆಮಣೆ ಏರುವುದು ಖಚಿತ ಎಂಬ ಮಾಹಿತಿ ಹರಿದಾಡುತ್ತಿದೆ. ಆದ್ರೆ ಇವರಿಬ್ಬರು ತಾವು ವಿವಾಹವಾಗುತ್ತಿರುವ ಬಗ್ಗೆ ಇದುವರೆಗೂ ಎಲ್ಲೂ ಬಾಯಿ ಬಿಟ್ಟಿಲ್ಲ.
ಹೌದು, ಕತ್ರಿನಾ ಮತ್ತು ವಿಕ್ಕಿ ಜೋಡಿ ಬಹಳ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಇದೀಗ ಈ ಜೋಡಿ ಹಸೆಮಣೆ ಏರಲು ಸಿದ್ದರಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಹೋಟೆಲ್ನಲ್ಲಿ ಡಿಸೆಂಬರ್ 7 ರಿಂದ 12 ರವರೆಗೆ ವಿವಾಹ ಮಹೋತ್ಸವ ನಡೆಯಲಿದೆ ಎಂದು ಹೇಳಲಾಗಿದೆ. ಇನ್ನು ಮದುವೆಗೆ ಎರಡು ಕುಟುಂಬದ ಕಡೆಯಿಂದ ಭರ್ಜರಿ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.
ಇನ್ನು ಮದುವೆಗೆ ಗೆಸ್ಟ್ ಲಿಸ್ಟ್ ಕೂಡ ರೆಡಿಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಷ್ಟೊಂದೆಲ್ಲಾ ತಯಾರಿ ತೆರೆಮರೆಯಲ್ಲಿ ನಡೆಯುತ್ತಿದ್ದರು ಸಹ ವಿಕ್ಕಿ ಹಾಗೂ ಕತ್ರಿನಾ ಆಗಲಿ ಅಥವಾ ಅವರ ಕುಟುಂಬದವರಾಗಲಿ ಮದುವೆ ಬಗ್ಗೆ ಇನೂ ಕೂಡ ಗುಟ್ಟು ಬಿಟ್ಟುಕೊಟ್ಟಿಲ್ಲ.
The post ಹಸೆಮಣೆ ಏರಲು ತೆರೆಮರೆಯಲ್ಲೇ ವಿಕ್ಕಿ ಕೌಶಲ್-ಕತ್ರಿನಾ ತಯಾರಿ; ಆದ್ರೂ ಬಾಯಿ ಬಿಡ್ತಿಲ್ಲ ಯಾಕೆ? appeared first on News First Kannada.