ಹಸೆಮಣೆ ಏರಲು ಮುಂದಾದ ಖ್ಯಾತ ಕಿರುತೆರೆ ನಟಿ ಕಾವ್ಯ ಗೌಡ; ಡೇಟ್​​ ಫಿಕ್ಸ್​

ಕನ್ನಡದ ನಟಿ ಮಣಿಯರು ತಮ್ಮ ಜೀವನದ ಪ್ರಮುಖ ಘಟ್ಟಕ್ಕೇ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಇತ್ತೀಚೆಗಷ್ಟೇ ಕನ್ನಡ, ತೆಲುಗು ಭಾಷೆಗಳಲ್ಲಿ ಮಿಂಚುತ್ತಿರುವ ತ್ರಿನಯನಿ ಖ್ಯಾತಿಯ ಆಶಿಕಾ ಪಡುಕೋಣೆ ಮದುವೆಯಾದರು. ಅದಾದ ಬಳಿಕ ಕನ್ನಡದ ಇನ್ನೊಬ್ಬ ನಟಿ ಪ್ರಿಯಾಂಕಾ ಚಿಂಚೊಳ್ಳಿಯವ್ರ ಮದುವೆ ಡೇಟ್​ ಕೂಡ ಅನೌನ್ಸ್​ ಮಾಡಿದ್ದರ ಬಗ್ಗೆ ಹಾಗೂ ಮದುವೆಯ ಕಂಪ್ಲೀಟ್​ ಪ್ಲಾನ್ಸ್​ ಬಗ್ಗೆ ನಾವೂ ಮಾಹಿತಿ ನೀಡಿದ್ವಿ..

ಇದೀಗ ಕನ್ನಡದ ಮತ್ತೊಬ್ಬ ನಟಿ ಸದ್ಯ ಮದುವೆಯ ಡೇಟ್​ ಅನೌನ್ಸ್​​ ಮಾಡಿದ್ದಾರೆ.. ಯೆಸ್​ ಅವ್ರು ಮತ್ಯಾರೂ ಅಲ್ಲಾ ಕಾವ್ಯಾ ಗೌಡ.. ಹೌದು ಇತ್ತಿಚೇಗಷ್ಟೆ ನಟಿ ಕಾವ್ಯಾ ಫ್ರೇಂಡ್ಸ್​ ಜೊತೆ ಬ್ಯಾಚುಲರೇಟ್​ ಪಾರ್ಟಿಯಲ್ಲಿ ಸಖತ್​ ಎಂಜಾಯ್​ ಮಾಡಿದ ವಿಷಯ ನಿಮಗೆ ತಿಳಿದಿದೆ..

ಸದ್ಯ ಸೋಮಶೇಖರ್​ ಅವರ ಜೊತೆ ಸಪ್ತಪದಿ ತುಳಿಯಲು ಕಾವ್ಯಾ ಸಜ್ಜಾಗಿದ್ದು ಡಿಸೆಂಬರ್​ 1 ರಂದು ಅದ್ಧೂರಿಯಾಗಿ ರಿಸೆಪ್ಷನ್​ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.. ಹಾಗೂ 2 ತಾರೀಖು ಕಾವ್ಯಾ ಮೂಹರ್ತ ಕ್ರಾರ್ಯಕ್ರಮ ಕೂಡಾ ಭರ್ಜರಿಯಾಗಿ ನಡೆಯಲಿದೆ.

ಕಾವ್ಯಾ ಹಾಗೂ ಸೋಮ​ಶೇಖರ್​ ಅವ್ರ ಮದುವೆ ಈ ಮುಂಚೆನೆ ನಡೆಯಬೇಕಿತ್ತು. ಆದ್ರೇ ಕೋವಿಡ್​ ಕಾರಣದಿಂದಾಗಿ ಅವ್ರು ತಮ್ಮ ಮದುವೆಯನ್ನ ಪೊಸ್ಟ್​ಪೋನ್​ ಮಾಡಿದ್ದರು. ಕಾವ್ಯಾ ಕುಟುಂಬದಲ್ಲಿ ಇವ್ರು ಕೊನೆಯ ಪುತ್ರಿ ಹಾಗೂ ಸೋಮಶೇಖರ್​ ಫ್ಯಾಂಮಿಲಿಯಲ್ಲಿಯೂ ಕೂಡ ಇವ್ರು ಕಿರಿಯ ಮಗ. ಆದ್ದರಿಂದ ಫ್ಯಾಮಿಲಿ ಮೆಂಬರ್ಸ್ ಹಾಗೂ ನಾವೂ ನಮ್​ ಮದುವೆ ಬಗ್ಗೆ ತುಂಬಾನೇ ಎಕ್ಸೈಟ್​ ಆಗಿದ್ದೀವಿ ಅಂತಾ ಕಾವ್ಯಾ ಹೇಳಿದ್ದಾರೆ.

ಇನ್ನೂ ರಿಸೆಪ್ಷನ್ ಮೂಹೂರ್ತ ಮಾತ್ರವಲ್ಲದೆ.. ಮೆಹಂದಿ, ಹಳದಿ ಹಾಗೂ ಸಂಗೀತ​ ಕಾರ್ಯಕ್ರಮಗಳಿಗೆ ಭರ್ಜರಿಯಾಗಿ ಎಲ್ಲಾ ರೀತಿಯ ತಯಾರಿಗಳನ್ನ ನಡೆಸ್ತಾಯಿದ್ದಾರೆ.. ಒಟ್ನಲ್ಲಿ ಕಾವ್ಯ ಅವರು ಸದ್ಯದಲ್ಲಿಯೇ ವಿವಾಹ ಎಂಬ ಪವಿತ್ರ ಬಂಧನಕ್ಕೆ ಒಳಗಾಗುತ್ತಿದ್ದು, ತಮ್ಮ ಮದುವೆಯ ಅದ್ಭುತ ಕ್ಷಣಗಳನ್ನ ಎಂಜಾಯ್​ ಮಾಡುತ್ತಿದ್ದಾರೆ.

News First Live Kannada

Leave a comment

Your email address will not be published. Required fields are marked *