ವಿಜಯಪುರ: ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನೂತನ ವಧು-ವರರು ಪರಸ್ಪರ ಮಾಸ್ಕ್ ಬದಲಾಯಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಅಂಬಿಕಾ ಹಾಗೂ ಪ್ರಶಾಂತ್ ನವಜೀವನಕ್ಕೆ ಕಾಲಿಟ್ಟ ಜೋಡಿ.

ಇನ್ನು ಮದುವೆಯಲ್ಲಿ ಕೊರೊನಾ ನಿಯಮಗಳನ್ನು ಪಾಲಿಸಲಾಗಿದೆ ಎನ್ನಲಾಗಿದೆ. ನಿಡಗುಂದಿ ಪಟ್ಟಣದ ಗೌರಿಶಂಕರ ಕಲ್ಯಾಣಮಂಟಪದಲ್ಲಿ ವಿವಾಹ ನಡೆದಿದ್ದು ವಧುವರರ ಈ ವಿಶೇಷ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

The post ಹಸೆಮಣೆ ಮೇಲೆ ಟೆಂಪರೇಚರ್ ಚೆಕ್.. ಹಾರದ ಬದಲಿಗೆ ಮಾಸ್ಕ್ ಬದಲಿಸಿಕೊಂಡ ಜೋಡಿ appeared first on News First Kannada.

Source: newsfirstlive.com

Source link