ಬ್ಯೂನಸ್‌ ಐರೆಸ್ : ಭಾರತದ ಹಾಕಿ ಪಡೆ ತನ್ನ ಆರ್ಜೆಂಟೀನಾ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ಒಲಿಂಪಿಕ್‌ ಚಾಂಪಿಯನ್‌ ಖ್ಯಾತಿಯ ಆತಿಥೇಯ ತಂಡವನ್ನು 4-3 ಗೋಲುಗಳಿಂದ ಮಗುಚಿದೆ.

ಭಾರತದ ಪರ ನೀಲಕಂಠ ಶರ್ಮ (16ನೇ ನಿಮಿಷ), ಹರ್ಮನ್‌ಪ್ರೀತ್‌ ಸಿಂಗ್‌ (28ನೇ ನಿಮಿಷ), ರೂಪಿಂದರ್‌ ಪಾಲ್‌ ಸಿಂಗ್‌ (33ನೇ ನಿಮಿಷ) ಮತ್ತು ವರುಣ್‌ ಕುಮಾರ್‌ (47ನೇ ನಿಮಿಷ) ಗೋಲು ಬಾರಿಸಿದರು.

3ನೇ ಕ್ವಾರ್ಟರ್‌ನಲ್ಲಿ ಆರ್ಜೆಂಟೀನಾ ಬಿರುಸಿನ ಆಟಕ್ಕಿಳಿದರೂ ಲಾಭವಾಗಲಿಲ್ಲ.

ಇದನ್ನೂ ಓದಿ :ಸುಬ್ರಹ್ಮಣ್ಯ : ಕೆದಿಲ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷ : ಆತಂಕದಲ್ಲಿ ಸ್ಥಳೀಯರು

ಪಾಕಿಸ್ಥಾನಕ್ಕೆ ಏಕದಿನ ಸರಣಿ
ಸೆಂಚುರಿಯನ್: ದ. ಆಫ್ರಿಕಾವನ್ನು 28 ರನ್ನುಗಳಿಂದ ಮಣಿಸಿದ ಪಾಕಿಸ್ಥಾನ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು. ಫ‌ಕಾರ್‌ ಜಮಾನ್‌ ಅವರ ಸತತ 2ನೇ ಶತಕ (101) ನೆರವಿನಿಂದ ಪಾಕ್‌ 7 ವಿಕೆಟಿಗೆ 320 ರನ್‌ ಪೇರಿಸಿತು. ಜವಾಬಿತ್ತ ದಕ್ಷಿಣ ಆಫ್ರಿಕಾ 49.3 ಓವರ್‌ಗಳಲ್ಲಿ 292ಕ್ಕೆ ಆಲೌಟ್‌ ಆಯಿತು.

ಕ್ರೀಡೆ – Udayavani – ಉದಯವಾಣಿ
Read More