‘ಹಾಗಾಗಿದ್ದರೆ ನಾನು ಈ ಸಿನಿಮಾ ಮಾಡುತ್ತಲೇ ಇರಲಿಲ್ಲ’; ‘ಆದಿಪುರುಷ್’ ನಿರ್ದೇಶಕನ ನೇರ ಮಾತು | Om Raut recalls If prabhas not Said okay to these project he may never did this project


2020ರ ಲಾಕ್​ಡೌನ್ ಸಂದರ್ಭದಲ್ಲೇ ಓಂ ರಾವತ್ ಅವರು ಪ್ರಭಾಸ್ ಬಳಿ ತೆರಳಿ ಈ ಚಿತ್ರದ ಕಥೆ ಹಾಗೂ ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬುದನ್ನು ಹೇಳಿದ್ದರು

‘ಹಾಗಾಗಿದ್ದರೆ ನಾನು ಈ ಸಿನಿಮಾ ಮಾಡುತ್ತಲೇ ಇರಲಿಲ್ಲ’; ‘ಆದಿಪುರುಷ್’ ನಿರ್ದೇಶಕನ ನೇರ ಮಾತು

ಓಂ-ಪ್ರಭಾಸ್

‘ಆದಿಪುರುಷ್’ ಸಿನಿಮಾದ (Adipurush Movie) ಟೀಸರ್ ರಿಲೀಸ್ ಆಗಿ ಎಲ್ಲ ಕಡೆಗಳಲ್ಲೂ ಟ್ರೋಲ್ ಆಗುತ್ತಿದೆ. ಈ ಚಿತ್ರದಲ್ಲಿ ಬರುವ ಕೆಲ ದೃಶ್ಯಗಳನ್ನು ಹಾಲಿವುಡ್​ ಸಿನಿಮಾಗಳ ದೃಶ್ಯಗಳಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಸಿನಿಮಾದ ಗ್ರಾಫಿಕ್ಸ್​ ಅನ್ನು ಅನೇಕರು ಕಾರ್ಟೂನ್ ನೆಟ್ವರ್ಕ್​ನಲ್ಲಿ ಬರುವ ಚೋಟಾ ಭೀಮ್​​ಗೆ ಹೋಲಿಕೆ ಮಾಡುತ್ತಿದ್ದಾರೆ. ಇದು ಚಿತ್ರತಂಡದ ಟೆನ್ಷನ್ ಹೆಚ್ಚಿಸಿದೆ. ರಿಲೀಸ್​​ಗೂ ಮುನ್ನವೇ ಈ ರೀತಿಯಲ್ಲಿ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕರೆ ಸಿನಿಮಾ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ. ಈಗ ನಿರ್ದೇಶಕ ಓಂ ರಾವತ್ (Om Raut) ಅವರು ಒಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಈ ಸಿನಿಮಾ ಸೆಟ್ಟೇರಿ ಕೆಲವು ವರ್ಷಗಳು ಕಳೆದಿವೆ. 2023ರ ಜನವರಿ ತಿಂಗಳಲ್ಲಿ ಸಿನಿಮಾ 3ಡಿಯಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಾರೆ ಎಂದಾದರೆ ಮಾತ್ರ ಈ ಪ್ರಾಜೆಕ್ಟ್​ ಕೈಗೆತ್ತಿಕೊಳ್ಳಲು ನಿರ್ದೇಶಕ ಓಂ ರಾವತ್ ನಿರ್ಧರಿಸಿದ್ದರು. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಈ ಸಿನಿಮಾದ ಕಥೆ ಬರೆಯುವಾಗ ಪ್ರಭಾಸ್ ಅವರು ರಾಮನ ಪಾತ್ರ ಮಾಡಬೇಕು ಎಂಬುದು ನನ್ನ ತಲೆಯಲ್ಲಿ ಇತ್ತು. ಒಂದೊಮ್ಮೆ ಅವರು ಸಿನಿಮಾ ಒಪ್ಪಿಕೊಳ್ಳದಿದ್ದರೆ ನಾನು ಈ ಸಿನಿಮಾ ಮಾಡುತ್ತಲೇ ಇರಲಿಲ್ಲ’ ಎಂದಿದ್ದಾರೆ ರಾವತ್.

2020ರ ಲಾಕ್​ಡೌನ್ ಸಂದರ್ಭದಲ್ಲೇ ಓಂ ರಾವತ್ ಅವರು ಪ್ರಭಾಸ್ ಬಳಿ ತೆರಳಿ ಈ ಚಿತ್ರದ ಕಥೆ ಹಾಗೂ ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬುದನ್ನು ಹೇಳಿದ್ದರು. ‘ಆದಿಪುರುಷ್’ ಚಿತ್ರದ ಕಥೆಯನ್ನು ಪ್ರಭಾಸ್​​ಗೆ ಹೇಳಲೇಬೇಕು ಎಂಬ ತುಡಿತ ಓಂಗೆ ಹೆಚ್ಚುತ್ತಲೇ ಇತ್ತು. ಈ ಕಾರಣಕ್ಕೆ ಲಾಕ್​ಡೌನ್ ಸಂದರ್ಭದಲ್ಲಿ ಕಷ್ಟಪಟ್ಟು ಹೈದರಾಬಾದ್ ತೆರಳಿ ಪ್ರಭಾಸ್ ಬಳಿ ಕಥೆ ಹೇಳಿದ್ದರು ಓಂ. ‘ಓಂ ರಾವತ್ ಅವರ ಸ್ಕ್ರೀನ್​ಪ್ಲೇ ಹಾಗೂ ನಮ್ಮ ಇತಿಹಾಸವನ್ನು ಅವರು ತೆರೆದಿಟ್ಟ ರೀತಿ ನನಗೆ ಇಷ್ಟವಾಯಿತು. ಈ ಕಾರಣಕ್ಕೆ ಸಿನಿಮಾ ಒಪ್ಪಿಕೊಂಡೆ’ ಎಂದು ಪ್ರಭಾಸ್ ಈ ಮೊದಲು ಹೇಳಿದ್ದರು.

TV9 Kannada


Leave a Reply

Your email address will not be published.