ಬೆಂಗಳೂರು: ನಗರದ ಹೊರವಲಯದಲ್ಲಿ ಎದೆನಡುಗಿಸುವ ಕೃತ್ಯವೊಂದು ನಡೆದಿದ್ದು ಆರ್​​ಟಿಐ ಕಾರ್ಯಕರ್ತರೊಬ್ಬರ ಕೈ ಕಾಲುಗಳನ್ನ ಕತ್ತರಿಸಿದ ಘಟನೆ ನಡೆದಿದೆ.

ಹಾಡಹಗಲೇ ಬೆಂಗಳೂರಿನ ಹೊರವಲಯ ತಾವರೆಕೆರೆಯಲ್ಲಿ ಈ ಕೃತ್ಯ ನಡೆದಿದ್ದು ಆರ್​ಟಿಐ ಕಾರ್ಯಕರ್ತ ವೆಂಕಟೇಶ್ ಎಂಬುವರರಿಗೆ ನಡು ರಸ್ತೆಯಲ್ಲಿ ದುಷ್ಕರ್ಮಿಗಳು ಕೈ ಮತ್ತು ಕಾಲು ಕತ್ತರಿಸಿದ್ದಾರೆ. ಸ್ಟೇಷನ್ ಗೆ ಕೂಗಳತೆ ದೂರದಲ್ಲೇ ರೌಡಿಗಳು ಮಚ್ಚು ಲಾಂಗ್​ಗಳಿಂದ ಈ ರೀತಿ ಹಲ್ಲೆ ನಡೆಸಿದ್ದಾರೆ.

ಸರ್ಕಾರಿ ವರ್ಕ್​ಗಳು ಸೇರಿ ಅನೇಕ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವೆಂಕಟೇಶ್ ಅರ್ಜಿ ಹಾಕಿದ್ರು ಎನ್ನಲಾಗಿದೆ. ಇದಕ್ಕೆ ಇದಕ್ಕೆ ಕಂಟ್ರಾಕ್ಟರ್​ಗಳಿಂದ ಅನೇಕ ಬಾರಿ ಬೆದರಿಕೆ ಕೇಳಿಬಂದಿತ್ತಂತೆ. ಆದ್ರೆ ಇದಕ್ಕೆಲ್ಲ ಕ್ಯಾರೆ ಎನ್ನದ ವೆಂಕಟೇಶ್ ಸಾಕಷ್ಟು ಕೆಲಸಗಳ ದಾಖಲೆಗಳನ್ನ ಕೇಳಿ ಅರ್ಜಿ ಹಾಕಿದ್ದರು ಎನ್ನಲಾಗಿದೆ.

ಇದೇ ದ್ವೇಷದ ಹಿನ್ನಲೆ ಕೃತ್ಯ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಸದ್ಯ ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನು ಆರೋಪಿಗಳ ಪತ್ತೆಗೆ ಮೂರು ಟೀಂ ಗಳನ್ನ ರಚನೆ ಮಾಡಲಾಗಿದ್ದು ಶೀಘ್ರದಲ್ಲೇ ಆರೋಪಿಗಳ‌ ಪತ್ತೆಗೆ ರಾಮನಗರ ಎಸ್ ಪಿ ಗಿರೀಶ್ ಆದೇಶ ಹೊರಡಿಸಿದ್ದಾರೆ.

ದಾವಣಗೆರೆ: ಇತ್ತ ದಾವಣಗೆರೆಯಲ್ಲೂ ಸಹ ಆರ್​ಟಿಐ ಕಾರ್ಯಕರ್ತ ಟಿ. ಶ್ರೀಧರ್ ಎಂಬುವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ವಾಕಿಂಗ್​ಗೆ ತೆರಳಿದ್ದ ವೇಳೆ ರಾಡ್​ನಿಂದ ಹಲ್ಲೆ ನಡೆಸಲಾಗಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಎಡಿಬಿ ಕಾಲೇಜು ಬಳಿ ಘಟನೆ ನಡೆದಿದೆ. ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.. ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ಹಾಡಹಗಲೇ ಎದೆನಡುಗಿಸುವ ಕೃತ್ಯ; ಆರ್​ಟಿಐ ಕಾರ್ಯಕರ್ತನ ಕೈ-ಕಾಲು ಕಟ್ ಮಾಡಿದ ದುಷ್ಕರ್ಮಿಗಳು appeared first on News First Kannada.

Source: newsfirstlive.com

Source link