ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್​ ಹತ್ಯೆಗೆ ಸಂಬಂಧಿಸಿದಂತೆ ಮೊಬೈಲ್ ಫೂಟೇಜ್ ಒಂದು ಎಲ್ಲೆಡೆ ವೈರಲ್ ಆಗಿದೆ.

ನಿನ್ನೆ ಹಾಡಹಗಲೇ ನಗರದ ಛಲವಾದಿಪಾಳ್ಯದ ಬಿಜೆಪಿ ಕಚೇರಿಯ ಬಳಿ ರೇಖಾ ಕದಿರೇಶ್​ ಅವರ ಕೊಲೆ ನಡೆದಿತ್ತು. ರೇಖಾ ಅವರ ಮರ್ಡರ್​​ಗೆ ಸಂಬಂಧಿಸಿದಂತೆ ಮೊಬೈಲ್ ಫೂಟೇಜ್​ ಒಂದು ಇದೀಗ ಲಭ್ಯವಾಗಿದೆ. ಅದರಲ್ಲಿ ಇಬ್ಬರು ಆರೋಪಿಗಳು ಮಾರಾಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಬಳಿಕ ರೇಖಾ ಕದಿರೇಶ್ ನೆಲಕ್ಕೆ ಬಿದ್ದಿದ್ದಾರೆ.

ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬ ಅವರನ್ನ ರಕ್ಷಣೆ ಮಾಡಲು ಮುಂದಾಗುತ್ತಾನೆ. ಈ ವೇಳೆ ಮತ್ತೋರ್ವ ಕೊಲೆಗಡುಕ ಆತನ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತಾನೆ. 7 ಸೆಕೆಂಡ್​ ಇರುವ ವಿಡಿಯೋ ಇದಾಗಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ.

The post ಹಾಡಹಗಲೇ ರೇಖಾ ಕದಿರೇಶ್ ಹತ್ಯೆಯ ಭಯಾನಕ ವಿಡಿಯೋ ವೈರಲ್ appeared first on News First Kannada.

Source: newsfirstlive.com

Source link