ಬೆಂಗಳೂರು: ನಗರದ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಸಿಬ್ಬಂದಿ, ಕೊರೊನಾ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡ್ತಿದ್ದಾರೆ.

ಕೊರೊನಾ ಹಾಗೂ ಬ್ಲಾಕ್ ಫಂಗಸ್​​ ಸೋಂಕಿನಿಂದ ರೋಗಿಗಳಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ  ಅವರಲ್ಲಿ ಧೈರ್ಯ ತುಂಬಲು ಸಂಗೀತ ಮತ್ತು ನೃತ್ಯ ಥೆರೆಪಿ ನೀಡಲಾಗ್ತಿದೆ. ಆಸ್ಪತ್ರೆ ವೈದ್ಯರು ಪಿಪಿಇ ಕಿಟ್ ಧರಿಸಿ ನೃತ್ಯ ಮಾಡಿದ್ದು, ವೈದ್ಯರ ಜೊತೆ ಸೋಂಕಿತರೂ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ.

ಈ ಥೆರಪಿಯಿಂದ ಸೋಂಕಿತರು ಬೇಗ ಗುಣಮುಖರಾಗ್ತಾರೆ. ಸೋಂಕಿತರ ಮನೋಬಲ ಹೆಚ್ಚಿಸೋಕೆ ಥೆರಪಿ ಶುರು ಮಾಡಲಾಗಿದೆ. ಬಹುತೇಕ ಜನ ಆತಂಕ, ಭಯದಿಂದಲೇ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ‌ ಭಯವನ್ನ ಹೋಗಲಾಡಿಸೋಕೆ ಈ ಥೆರಪಿ ಅಂತ ಸಪ್ತಗಿರಿ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

The post ಹಾಡಿ-ಕುಣಿದು ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿದ ಸಪ್ತಗಿರಿ ಆಸ್ಪತ್ರೆ ಸಿಬ್ಬಂದಿ appeared first on News First Kannada.

Source: newsfirstlive.com

Source link