ಹಾಡುಗಳಿಂದ ಸದ್ದು ಮಾಡ್ತಿರೋ ‘ಪ್ರೇಮಂ ಪೂಜ್ಯಂ’ನ 10ನೇ ಹಾಡು ಬಿಡುಗಡೆ

ಲವ್ಲಿ ಸ್ಟಾರ್ ಪ್ರೇಮ್​​ ಅವರ 25ನೇ ಚಿತ್ರ ‘‘ಪ್ರೇಮಂ ಪೂಜ್ಯಂ’’. ಈ ಚಿತ್ರದಿಂದ ಸಂಗೀತ ಲೋಕಕ್ಕೆ ಮಧುರವಾದ ಹಾಡುಗಳ ಪೂಜೆಯೇ ನಡೆಯುತ್ತಿದೆ. ‘‘ಪ್ರೇಮಂ ಪೂಜ್ಯಂ’’ ತಂಡದಿಂದ ಈಗಾಗಲೇ 9 ಹಾಡುಗಳ ಸುಸ್ವರಗಳು ಹೊರ ಬಂದಿದ್ದು ಈಗ 10ನೇ ಸಂಗೀತ ಸ್ವರ ಮಾಲೆಯನ್ನ ಚಿತ್ರರಸಿಕರ ಸಂಗೀತ ಮಾರುಕಟ್ಟೆ ಅರ್ಪಿಸಲು ಮುಂದಾಗಿದೆ.

ಲವ್ಲಿ ಸ್ಟಾರ್ ಪ್ರೇಮ್ ಅವರ 25ನೇ ಸಿನಿಮಾ ಪ್ರೇಮಂ ಪೂಜ್ಯಂ.. ಲವ್ಲಿ ಹಾಡುಗಳು ಲವ್ಲಿ ಬ್ಯಾಕ್​ಗ್ರೌಂಡ್ ಸೀನರಿಯಿಂದ ನೋಡುಗರ ಮನದಲ್ಲಿ ಇಂಪ್ರೇಸ್ ಮಾಡ್ತಿದೆ.. ವೈದ್ಯ ಲೋಕದಲ್ಲಿ ಸ್ಕೆತಸ್ಕೋಪ್ ಹಿಡಿದು ಸೇವೆ ಸಲ್ಲಿಸುತ್ತಿದ್ದ ಡಾ.ರಾಘವೇಂದ್ರ ಬಿ.ಎಸ್​ ಫಸ್ಟ್ ಟೈಮ್ ಡೈರೆಕ್ಷನ್ ನೊಗವನ್ನ ಹೊತ್ತಿದ್ದಾರೆ.. ಕಥೆ , ಚಿತ್ರಕಥೆ , ಸಂಭಾಷಣೆ , ಸಂಗೀತ ಹಾಗೂ ನಿರ್ದೇಶನದ ಜವಾಬ್ದಾರಿಯನ್ನ ಹೊತ್ತು ಸಿನಿಮಾವನ್ನ ಪ್ರೇಮದಿಂದ ಪೂಜ್ಯ ಭಾವನೆಯಿಂದ ಮಾಡಿದ್ದಾರೆ.

‘ಪ್ರೇಮಂ ಪೂಜ್ಯಂ’ ಸಿನಿಮಾ ತಂಡದಿಂದ ಈಗಾಗಲೇ ಬರೋಬ್ಬರಿ 9 ಹಾಡುಗಳು ಹೊರ ಬಂದಿದು ಈಗ 10ನೇ ಹಾಡಿನ ಸಂಭ್ರಮ.. ಒಟ್ಟು 14 ಹಾಡುಗಳು ಈ ಸಿನಿಮಾದಲ್ಲಿ ಅಡಗಿವೆ.. ಈಗ ಹತ್ತನೇ ಹಾಡನ್ನ ಕೇಳೋ ಸಮಯ ಮತ್ತು ನೋಡೋ ಸುಂದರ್ಭ.. ಪ್ರೇಮಂ ಪೂಜ್ಯಂ ಸಿನಿಮಾ ಹತ್ತನೇ ಹಾಡು ಈ ನಿನ್ನನು ಬಿಟ್ಟು ಎಂಬೋ ಗೀತೆ.

ಮಾಲಿವುಡ್ ಪ್ಲಸ್ ಬಾಲಿವುಡ್ ಸಂಗೀತ ಲೋಕದಲ್ಲಿ ಫೇಮಸ್ ಆಗಿರೋ ಹಾಡುಗಾರ ಶಹಬಾಜ್ ಅಮನ್ ಅವರಿಂದ ಹಾಡಿಸಿದೆ ಚಿತ್ರ ತಂಡ.. ಕನ್ನಡದಲ್ಲಿ ಫಸ್ಟ್ ಟೈಮ್ ಹಾಡಿರುವ ಶಹಬಾಜ್ ಅಮನ್ ಹಾಡಿನ ಪದಕಗಳನ್ನ ಬರೋಬ್ಬರಿ 5ಗಂಟೆಗಳ ಕಾಲ ಪ್ರಾಕ್ಟಿಸ್ ಮಾಡಿ ಪ್ರೀತಿಯಿಂದ ಭಾವ ಜೀವ ತುಂಬಿ ಹಾಡಿ ಕೊಟ್ಟಿದ್ದಾರೆ.

ಹಾಡುಗಳಿಂದ ಸದ್ದು ಮಾಡ್ತಿರೋ ಪ್ರೇಮಂ ಪೂಜ್ಯಂ ತಂಡ ಈ ತಿಂಗಳ 29ನೇ ತಾರೀಖ್ ಪ್ರೇಕ್ಷಕರ ಮುಂದೆ ಅದ್ಧೂರಿಯಾಗಿ ಬಂದು ನಿಲ್ಲಲಿದೆ.

News First Live Kannada

Leave a comment

Your email address will not be published. Required fields are marked *