‘ಹಾನಗಲ್​​ನಲ್ಲಿ ಬಿಜೆಪಿ ಸೋತ ಕಾರಣ ಪೆಟ್ರೋಲ್​​ ಬೆಲೆ ಇಳಿಕೆ ಮಾಡಲಾಗಿದೆ’- ಡಿಕೆಎಸ್​​​​​​


ಬೆಂಗಳೂರು: ಉಪ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಮತದಾರನ ತೀರ್ಪಿನ ಹಿನ್ನೆಲೆಯಲ್ಲಿ ಒಂದಷ್ಟು ಶುಭ ಸೂಚನೆ ಇದೆ ಅಂತ ಹೇಳಿದ್ದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರನ ತೀರ್ಪಿಗೆ ಎಷ್ಟು ಬೆಲೆ ಇದೆ ಅನ್ನೋದಕ್ಕೆ, ಸರ್ಕಾರ ಮತದಾರರ ತೀರ್ಪಿಗೆ ಎಷ್ಟು ಹೆದರುತ್ತೆ ಅನ್ನೋದಕ್ಕೆ ಈ ಉಪಚುನಾವಣೆ ಫಲಿತಾಂಶ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಪೆಟ್ರೋಲ್​, ಡೀಸೆಲ್​ ದರ ಇಳಿಕೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್​, ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿರೋದು ಬೈ ಎಲೆಕ್ಷನ್ ರಿಸಲ್ಟ್ ಪರಿಣಾಮ. ಆಡಳಿತ ಇರುವ ರಾಜ್ಯದಲ್ಲೇ ವಿರುದ್ಧ ಮತದಾರರು ಸಂದೇಶ ಕೊಟ್ಟಿದ್ದಾರೆ. ನಾವೂ ಇದನ್ನೇ ಹೇಳುತ್ತಿದ್ದೆವು, ನಿಮ್ಮ ಬೆಳರಳಿನಿಂದ ಹಸ್ತಕ್ಕೆ ಒತ್ತಿದರೆ ಅವರಿಗೆ ಮನವರಿಕೆ ಆಗುತ್ತೆ ಅಂತ.. ನಾನು ಈ ಬಗ್ಗೆ ಪದೇ ಪದೇ ಹೇಳಿದ್ದೆ. ಇಂಧನ ಬೆಲೆ ಇಳಿಕೆ ಮಾತ್ರವಷ್ಟೇ ಸಾಲದು, ಎಲ್ಲರಿಗೂ ಉದ್ಯೋಗ ಸಿಗಬೇಕು. ಹೆಣ್ಣು ಮಕ್ಕಳಿಗೆ ಹೇಳಿದ್ದೆ.. ಸ್ಕೂಟರ್ ಗೆ, ಕಾರ್ ಗೆ ಕೈ‌ ಮುಗಿದು ಹೋಗಿ ಓಟ್ ಹಾಕಿ ಅಂದಿದ್ದೆ. ಗ್ಯಾಸ್ ಬೆಲೆ ಕಡಿಮೆ ಮಾಡಿಲ್ಲ, ಗ್ಯಾಸ್ ಬೆಲೆ ಕಡಿಮೆ ಮಾಡೋವರೆಗೂ ನಮ್ಮ ಹೋರಾಟ ಮುಂದುವರಿಯಬೇಕು ಎಂದು ತಿಳಿಸಿದರು.

ಇದೇ ತಿಂಗಳ 14 ರಿಂದ ಬೆಲೆ ಇಳಿಕೆಗೆ ಒತ್ತಾಯಿಸಿ ದೇಶಾದ್ಯಂತ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡ್ತೀವಿ ಅಂತ ಹೇಳಿದ್ರು ಕೊಟ್ಟಿಲ್ಲ. ಬಿಜೆಪಿ ಸರ್ಕಾರದ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಈ ಮಾನದಂಡ ಸಿಮೆಂಟ್ ನಲ್ಲೂ ಆಗಬೇಕು, ಕಬ್ಬಿಣ, ಗ್ಯಾಸ್, ದಿನಬಳಕೆ ವಸ್ತುಗಳಲ್ಲಿ ಆಗಬೇಕು. ಸರ್ಕಾರ ವೈಫಲ್ಯ ಮತದಾರರ ತೀರ್ಪಿನಿಂದ ಬಹಿರಂಗವಾಗಿದೆ. ಇನ್ನೇನು‌ ಸದ್ಯದಲ್ಲಿ ಕತ್ತಲಲ್ಲಿ ಕರ್ನಾಟಕ ಆರಂಭವಾಗಲಿದೆ. ಪವರ್ ಕಟ್ ತೋರಿಸಿದರೆ ಯಾವುದೇ ಇನ್ವೆಸ್ಟರ್ ರಾಜ್ಯಕ್ಕೆ ಬರಲ್ಲ. ಸಿಎಂ ಇಂಧನ ಇಲಾಖೆಯಲ್ಲಿ ವಿಶೇಷ ಕಾಳಜಿ ವಹಿಸಿ.. ಅರ್ಧ ಲೋಡಿಂಗ್ ನಲ್ಲಿ ಕೆಲಸ ಮಾಡ್ತಾ ಇದೆ, ಅದಕ್ಕೆ ಅವಕಾಶ ಕೊಡಬೇಡಿ. ಇಂಧನ ಸಚಿವನಾಗಿದ್ದ ಕಾರಣಕ್ಕೆ ನನ್ನ ಬಳಿ ಎಲ್ಲಾ ಮಾಹಿತಿ ಇದೆ. ಒಂದೊಂದು ದಿನಕ್ಕೆ ಆಗುವಷ್ಟು ಕಲ್ಲಿದ್ದಲು ಅಷ್ಟೇ ರಾಜ್ಯಕ್ಕೆ ಬರ್ತಿದೆ. ಈಗಲೇ ಜಾಗೃತರಾಗಿ ಉಳಿಸಿಕೊಳ್ಳೋ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಕೆಲವರು ಪಕ್ಷಕ್ಕೆ ಬರುವವರು ಇದ್ದಾರೆ, ನಾನು ಬೇಡ ಅನ್ನಲ್ಲ. ಕೆಲವರು ನನಗೆ ಆಗದೇ ಇರಬಹುದು, ಕೆಲವರು ಬೇರೆಯವರಿಗೆ ಆಗದೇ ಇರಬಹುದು. ಆದರೆ ವೈಯುಕ್ತಿಕ ಅಲ್ಲ, ಪಕ್ಷ ಅಂತ ನೋಡ್ತೀವಿ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಯಾರೇ ಬಂದರೂ ಸ್ವಾಗತ. ಕೆಲವರು ನನಗೆ ಆಗದೇ ಇರಬಹುದು, ಆದರೆ ಪಕ್ಷದ ದೃಷ್ಟಿಯಿಂದ ಸ್ವಾಗತ ಮಾಡ್ತೇವೆ. ಅಶೋಕ್ ಮನಗೂಳಿ ಅಭ್ಯರ್ಥಿ ಆಗಿದ್ದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಈಗಲೂ ಕೂಡ ಅನೇಕ ಕಡೆ ಬರೋದಕ್ಕೆ ಸಿದ್ಧರಿದ್ದಾರೆ. ಯಾರು ಯಾರು ಬರೋದಕ್ಕೆ ಸಿದ್ಧವಿದ್ದಾರೆ ಅಂತ ಗೊತ್ತಾದರೆ ಗಾಬರಿ ಆಗಬಹುದು.. ಒಂದು ಖುರ್ಚಿ ಖಾಲಿ ಇದ್ದರೆ ನಾಲ್ಕು ಮಂದಿ ಕಣ್ಣು ಹಾಕ್ತಾರೆ. ಈಗ ಬಿಜೆಪಿ ನಾಯಕರ ಕೈಲಿ ಅಧಿಕಾರ ಇತ್ತು, ಕೆಲವರಿಗೆ ಬೋರ್ಡ್ ಅಧ್ಯಕ್ಷ ಮಾಡಿ ಸುಮ್ಮನಾಗಿಸಿದ್ದಾರೆ. ನಮ್ಮಿಂದ ಹೋದರಲ್ಲ ಆ 13 ಕ್ಷೇತ್ರಗಳಲ್ಲಿ ಮುಂದೆ ಏನಾಗತ್ತೆ ನೀವೇ ನೋಡಿ. ಅಲ್ಲಿ ಒರಿಜಿನಲ್ ಇದ್ರಲ್ಲ ಅವರು ಏನು ಮಾಡ್ತಾರೆ ನೀವೇ ನೋಡಿ ಎಂದು ಎಚ್ಚರಿಕೆ ರವಾನಿಸಿದರು.

News First Live Kannada


Leave a Reply

Your email address will not be published. Required fields are marked *