ಬೆಂಗಳೂರು: ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲು ಎದುರಾಗಿತ್ತು. ಈ ಬಗ್ಗೆ ಮಾತನಾಡಿಕೊಂಡಿರುವ ವಸತಿ ಸಚಿವ ವಿ.ಸೋಮಣ್ಣ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಮಗೆ ಹಾನಗಲ್ ಕೊಟ್ಟಿದ್ದರೇ ಗೆಲ್ಲಿಸಬಹುದಿತ್ತು ಎಂದು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲ್ಲೇ ಸೋಲು ಎದುರಾಗಿದ್ದು, ಆಡಳಿತರೂಢ ಸರ್ಕಾರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಬಳಿಕ ಅಧಿಕಾರ ವಹಿಸಿಕೊಂಡಿದ್ದ ಸಿಎಂ ಅವರಿಗೆ ಮುಖಭಂಗ ಎದುರಾಗಿತ್ತು. ಈ ನಡುವೆ ಉಪಚುನಾವಣೆ ಸೋಲಿನ ಬಗ್ಗೆ ಆತ್ಮವಾಲೋಕನ ಹಾಗೂ ಚುನಾವಣೆ ಉಸ್ತುವಾರಿ ವಹಿಸುವ ಕುರಿತು ಇಬ್ಬರು ನಾಯಕರು ಅಸಮಾಧಾನ ಹೊರಹಾಕಿದ್ದಂತಿದೆ. ಚುನಾವಣೆಗೂ ಮುನ್ನ ಕ್ಷೇತ್ರಕ್ಕೆ ಚುನಾವಣಾ ಜವಾಬ್ದಾರಿ ವಹಿಸಿಲು ಪಕ್ಷದಲ್ಲಿ ಗೊಂದಲ ಎದುರಾಗಿತ್ತಾ? ಉಸ್ತುವಾಗಿ ನೇಮಕ ವಿಚಾರದಲ್ಲಿ ಅಸಮಾಧಾನ ಮೂಡಿತ್ತಾ ಎಂಬ ಪ್ರಶ್ನೆಗಳು ಎದುರಾಗಿದೆ.
ಸೋಮಣ್ಣ-ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಸಂಭಾಚಣೆ..
- ಸೋಮಣ್ಣ – ನಿನಗೆ ಎಷ್ಟು ಶಕ್ತಿ ಇದೆ ಅಂತಾ ಹೇಳು. 135 ಸೀಟು ತರ್ತೀವಿ ಅಂತಾ ಹೇಳು ಹೋಗಿ.
- ಯತ್ನಾಳ್ – ಹಾನಗಲ್ನಲ್ಲಿ ನಿಮಗೆ ಹಾಕಿದ್ದರೆ ಸಾಕಿತ್ತು.
- ಸೋಮಣ್ಣ – ನಾವಿಬ್ಬರೆ ಸಾಕಿತ್ತು.
- ಸೋಮಣ್ಣ – ಯಾರಿಗೆ ಹೇಳೋದು ಹೋಗಿ
- ಸೋಮಣ್ಣ – ಇದನ್ನು ತೆಗಿಯಪ್ಪಾ.. ಇನ್ನು ಯಾವನ್ ತಲೆ ಬೋಳಿಸ್ತಾರೋ ಕಾಣು.
ಇಬ್ಬರು ನಾಯಕರ ಮಾತಿನ ಅಂತ್ಯದಲ್ಲಿ ಸೋಮಣ್ಣ ಅವರು, ಪಕ್ಷದ ಸಮಸ್ಯೆಗಳನ್ನು ಯಾರಿಗೆ ಹೇಳೋದು ಎಂದು ಹೇಳಿದ್ದಾರೆ. ಈ ಮಾತು ಕೂಡ ಬಿಜೆಪೆಯಲ್ಲಿ ನಾಯಕತ್ವದ ಗೊಂಡಲ ಮೂಡಿದೆಯಾ ಎಂಬ ಅನುಮಾನ ಎದುರಾಗಿದೆ. 2023ರ ಚುನಾವಣೆಗೆ ಸಿದ್ಧತೆ, ಪಕ್ಷ ಸಂಘಟನೆ ಹಾಗೂ ನಾಯಕತ್ವದ ನಗ್ಗೆ ಕಾರ್ಯರ್ತರಲ್ಲಿ ಮೂಡಿತ್ತಂತೆ. ಸದ್ಯ ಸೋಮಣ್ಣ ಅವರ ಅಸಹಾಯಕತೆ ಸ್ಥಿತಿ ಹೈಕಮಾಂಡ್ಗೆ ತಲುಪುತ್ತಾ..? ಅದನ್ನು ಪಕ್ಷ ನಾಯಕರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಸದ್ಯ ಎದುರಾಗಿದೆ.
The post ಹಾನಗಲ್ ಸೋಲು; ‘ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು? ಸೋಮಣ್ಣ, ಯತ್ನಾಳ್ ಗುಸು ಗುಸು appeared first on News First Kannada.