ಹಾನಗಲ್​ ಗೆಲ್ಲಲು ಸರ್ಕಸ್​​; ಲಿಂಗಾಯತರ ಸೆಳೆಯೋಕೆ ಬಿಜೆಪಿ ನಾಯಕರ ಪ್ಲಾನ್​ ಏನು ಗೊತ್ತಾ?

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಜಾತಿ ಮತ್ತು ವ್ಯಕ್ತಿ ಆಧಾರದ ಮೇಲೆ ನಡೆಯುವ ಚುನಾವಣೆ ಇದಾಗಿದ್ದು, ಕ್ಷೇತ್ರದಲ್ಲಿ ಜಾತಿವ್ಯೂಹ ರಚಿಸಿದೆ. ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಸಲಹೆ ಮೇರೆಗೆ ಅಭ್ಯರ್ಥಿಯನ್ನು ಗೆಲ್ಲಿಸಲು ಸಿಎಂ ಬಸವರಾಜ್​ ಬೊಮ್ಮಾಯಿ ರಣತಂತ್ರ ಹೆಣೆದಿದ್ದಾರೆ.

ಇನ್ನು, ಚುನಾವಣೆ ಗೆಲ್ಲಲು ಸಚಿವರಿಗೆ ಹಾಗೂ ನಾಯಕರಿಗೆ ಜಾತಿವಾರು ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಕ್ಷೇತ್ರದಲ್ಲಿ ಗೆಲುವಿಗೆ ಪಂಚಮಸಾಲಿ ವೋಟುಗಳು ನಿರ್ಣಾಯಕ. 85 ಸಾವಿರ ಲಿಂಗಾಯತ ವೋಟುಗಳು ಪೈಕಿ 60 ಸಾವಿರ ಮತ ಪಂಚಮಸಾಲಿ ಸಮಾಜ ಹೊಂದಿದೆ.

ಪಂಚಮಸಾಲಿ ಸಮಾಜದ ಮತಗಳ ಸೆಳೆಯಲು ಸಚಿವ ಮುರಗೇಶ್​​ ನಿರಾಣಿ ಮುಂದಾಗಿದ್ದಾರೆ. ಇವರಿಗೆ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣ ಕುಮಾರ್​​ ಪೂಜಾರ್ ಸಾಥ್ ನೀಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಉಸ್ತುವಾರಿಗೆ ಬಿಗ್​​ ಫೈಟ್​​; ‘ಈ ಖಾತೆ ನಿಮ್ಮ ಬಳಿಯೇ ಇರಲಿ’- ಸಿಎಂಗೆ ಹಲವರ ಒತ್ತಾಯ

ಉಪಜಾತಿ ನೊಣಬರನ್ನು ಒಲೈಕೆ ಮಾಡುವ ಹೊಣೆ ಸಚಿವ ಜೆ ಮಾದುಸ್ವಾಮಿ ಹೆಗಲಿಗೆ ನೀಡಲಾಗಿದೆ. ಯುವ ಸಮುದಾಯ ಹಾಗೂ ಬಿಎಸವೈ ಅಭಿಮಾನಿಗಳನ್ನು ಸೆಳೆಯಲು ವಿಜಯೇಂದ್ರ ಎಂಟ್ರಿ ಕೊಟ್ಟಿದ್ದಾರೆ. ಸಾದರ ಲಿಂಗಾಯತ ಮತಗಳ ಹೊಣೆ ಸಿಎಂ ಬೊಮ್ಮಾಯಿ ಹಾಗೂ ಬಿಸಿ ಪಾಟೀಲ್ ಹೆಗಲ ಮೇಲೆ ಇದೆ.

News First Live Kannada

Leave a comment

Your email address will not be published. Required fields are marked *