ಹಾರಾಡುವಾಗಲೇ ವಿಮಾನದ ಎಂಜಿನ್ ಫೇಲ್; ಪೈಲಟ್​ನ ಸಾಹಸದಿಂದಾಗಿ 17 ಜೀವಗಳು ಸೇಫ್

ಹಾರಾಡುವಾಗಲೇ ವಿಮಾನದ ಎಂಜಿನ್ ಫೇಲ್; ಪೈಲಟ್​ನ ಸಾಹಸದಿಂದಾಗಿ 17 ಜೀವಗಳು ಸೇಫ್

ರಷ್ಯಾದಲ್ಲಿ ವಿಮಾನವೊಂದು ಇದ್ದಕ್ಕಿದ್ದಂತೆ ರಾಡಾರ್ ಸಿಗ್ನಲ್​ಗೆ ಸಿಗದಂತೆ ನಾಪತ್ತೆಯಾಗಿತ್ತು. ವಿಮಾನದಲ್ಲಿ 17 ಪ್ರಯಾಣಿಕರಿದ್ದರು.. ಈ ಹಿನ್ನೆಲೆ ಕಾಣೆಯಾದ ವಿಮಾನಕ್ಕಾಗಿ ವ್ಯಾಪ ಹುಡುಕಾಟ ನಡೆಸಲಾಗಿತ್ತು. ಭಾರೀ ಶೋಧದ ನಂತರ ನಾಪತ್ತೆಯಾಗಿದ್ದ ವಿಮಾಮ ಸೈಬೀರಿಯನ್ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದು ಪವಾಡವೆಂಬಂತೆ 17 ಮಂದಿಯೂ ಜೀವಂತವಾಗಿ ಪತ್ತೆಯಾಗಿದ್ದಾರೆ.

ಕಾಣೆಯಾಗಿದ್ದ ವಿಮಾನ ಕೆಡ್ರೊವೊಯೆಯಿಂದ ಟೊಮ್ಸ್ಕ್​ಗೆ ತೆರಳುತ್ತಿತ್ತು.. ಈ ವೇಳೆ ಎರಡು ಎಂಜಿನ್​ಗಳ ಪೈಕಿ ಒಂದು ಎಂಜಿನ್ ನಿಷ್ಕ್ರಿಯಗೊಂಡಿದ್ದು ಪೈಲಟ್ ತನ್ನ ಬುದ್ಧಿವಂತಿಕೆ ಬಳಸಿ ವಿಮಾನವನ್ನ ಲ್ಯಾಂಡ್ ಮಾಡಿದ ಪರಿಣಾಮ ಪ್ರಯಾಣಿಕರು ಬದುಕುಳಿದಿದ್ದಾರೆ ಎನ್ನಲಾಗಿದೆ. ವಿಮಾನ ಪತ್ತೆಯಾದಾಗ ತಲೆಕೆಳಗಾಗಿ ಬಿದ್ದಿತ್ತು ಎಂದು ಹೇಳಲಾಗಿದೆ.

The post ಹಾರಾಡುವಾಗಲೇ ವಿಮಾನದ ಎಂಜಿನ್ ಫೇಲ್; ಪೈಲಟ್​ನ ಸಾಹಸದಿಂದಾಗಿ 17 ಜೀವಗಳು ಸೇಫ್ appeared first on News First Kannada.

Source: newsfirstlive.com

Source link