ಭವಿಷ್ಯದಲ್ಲಿ ಟೀಮ್ ಇಂಡಿಯಾ ಭರವಸೆ ಇಡಬಹುದಾದ ಆಲ್ರೌಂಡರ್ ಹೆಸರನ್ನು ಟೀಮ್ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ. ದೇಶಿ ಟೂರ್ನಿಗಳಲ್ಲಿ ಹಲವು ವರ್ಷಗಳ ಕಾಲ ಉತ್ತಮ ಪ್ರದರ್ಶನ ನೀಡಿರೋ ಅನುಭವಿ ಆಲ್ರೌಂಡರ್ ರಿಷಿ ಧವನ್ಗೆ ಅವಕಾಶ ಕೊಡಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.
ರಿಷಿ ಧವನ್ ಭಾರತ ತಂಡದ ಪರ ಆಡಿದ್ದಾರೆ. ಭಾರತ ತಂಡಕ್ಕೆ ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಅಗತ್ಯ ತುಂಬಾ ಇದೆ. ಇದಕ್ಕೆ ರಿಷಿ ಧವನ್ ಸೂಕ್ತ ಆಯ್ಕೆ ಎಂದಿದ್ದಾರೆ ಗವಾಸ್ಕರ್.
ಭಾರತ ತಂಡ ನಾಲ್ಕು ಬಾರಿ ಐಸಿಸಿ ಟ್ರೋಫಿ ಗೆದ್ದಾಗಲೂ ತಂಡ ಗೆಲ್ಲೋದರಲ್ಲಿ ಆಲ್ರೌಂಡರ್ಸ್ ಪಾತ್ರ ಬಹಳ ಮುಖ್ಯವಾಗಿತ್ತು. ರಿಷಿ ಧವನ್ ಲಯ ಕಂಡರೆ ಭಾರತಕ್ಕೆ ಒಳ್ಳೇದು ಎಂದು ತಿಳಿಸಿದ್ದಾರೆ.