ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಕರಿಯರ್ ಮುಳುಗುವ ಹಡಗಿನ ಪರಿಸ್ಥಿತಿಯಲ್ಲಿದೆ. ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡೋಕೆ ಹರಸಾಹಸಪಡ್ತಿದ್ದಾರೆ. ಆದರೆ ಹಾರ್ದಿಕ್ ಎಂಟ್ರಿಗೆ ಈತ ಅಡ್ಡಗಾಲಾಗಿ ನಿಂತಿದ್ದಾರೆ. ಇದರಿಂದ ಹಾರ್ದಿಕ್ ರಿ ಎಂಟ್ರಿ ಬಹುತೇಕ ಕಷ್ಟ ಎಂದೇ ಹೇಳಲಾಗ್ತಿದೆ.
ಸೀಮಿತ ಓವರ್ಗಳ ಮ್ಯಾಚ್ ಫಿನಿಷರ್ ಎನಿಸಿದ್ದ ಹಾರ್ದಿಕ್ ಪಾಂಡ್ಯ, ಇದೀಗ ತಂಡಕ್ಕೆ ಬೇಡವಾಗಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ತಂಡಕ್ಕೆ ದೂರವಾಗಿರುವ ಹಾರ್ದಿಕ್, ಮುಂದೆ ಸಂಪೂರ್ಣ ಫಿಟ್ ಆದ್ರೂ, ರೀ ಎಂಟ್ರಿ ಕೊಡೋದು ಅಸಾಧ್ಯವೆಂದೇ ಪರಿಗಣಿಸಲಾಗಿದೆ. ಅದಕ್ಕೆ ಕಾರಣ ತಂಡಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ವೆಂಕಟೇಶ್ ಅಯ್ಯರ್..!
ಹೌದು. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅಯ್ಯರ್, ಇದೀಗ ಏಕದಿನಕ್ಕೂ ಕಾಲಿಟ್ಟಿದ್ದಾರೆ. ಅದರಲ್ಲೂ ಕಡಿಮೆ ಅವಧಿಯಲ್ಲೇ ಡೆಬ್ಯೂ ಮಾಡಿ ಯಶಸ್ಸು ಕೂಡ ಕಂಡಿದ್ದಾರೆ. IPL ಬಳಿಕ ವಿಜಯ್ ಹಜಾರೆ ಟೂರ್ನಿಯಲ್ಲೂ ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಇದೇ ಕಾರಣಕ್ಕೆ ಹಾರ್ದಿಕ್ ಹಾದಿ ಸಂಕಷ್ಟಕ್ಕೆ ಸಿಲುಕಿರೋದು.!
ಹಾರ್ದಿಕ್ ಫಿಟ್ ಆದ್ರು ತಂಡಕ್ಕೆ ಎಂಟ್ರಿ ಕಷ್ಟ..!
ಯೆಸ್.! ಹಾರ್ದಿಕ್ ಇಂಜುರಿಯಾಗಿದ್ರೂ, ಫಿಟ್ನೆಸ್ ಕಡೆ ಗಮನ ನೀಡದೇ ಬೇಜವಾಬ್ದಾರಿತನ ಪ್ರದರ್ಶಿಸಿದ್ರು. ಈ ಹಿನ್ನೆಲೆ ಆಯ್ಕೆ ಸಮಿತಿ ಯಾವುದೇ ಸರಣಿಗೆ ಆಯ್ಕೆ ಮಾಡಿಲ್ಲ. ಹಾಗಾಗಿ ತಂಡಕ್ಕೆ ರೀ ಎಂಟ್ರಿ ಪಡೆಯಲೇಬೇಕೆಂದು ಪಣತೊಟ್ಟಿರುವ ಹಾರ್ದಿಕ್, ಪರ್ಸನಲ್ ಟ್ರೈನರ್ನನ್ನ ಇಟ್ಟುಕೊಂಡು, ಫಿಟ್ನೆಸ್ ಕಡೆ ಫೋಕಸ್ ಮಾಡಿದ್ದಾರೆ.
ಆದ್ರೆ ಫಿಟ್ ಆದರೂ ಹಾರ್ದಿಕ್ IPLನಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಅಷ್ಟೆ ಅಲ್ಲ ದೇಶೀಯ ಕ್ರಿಕೆಟ್ನಲ್ಲೂ ಭರ್ಜರಿ ಪ್ರದರ್ಶನ ನೀಡಬೇಕು. ಆ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆಯಬೇಕು. ಆದ್ರೆ ಅಷ್ಟರೊಳಗೆ ವೆಂಕಟೇಶ್ ತಂಡದಲ್ಲಿ ಸ್ಥಾನವನ್ನ ಭದ್ರಪಡಿಸಿಕೊಂಡಿರುತ್ತಾರೆ. ಹೀಗಾಗಿ ಪಾಂಡ್ಯ ಕಮ್ಬ್ಯಾಕ್ ಬಹುತೇಕ ಕಷ್ಟ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.
ಇನ್ನು ಹಾರ್ದಿಕ್ ಸ್ಥಾನಕ್ಕೆ ವೆಂಕಟೇಶ್ ಮಾತ್ರ ಕುತ್ತು ತಂದಿಲ್ಲ. ಶಾರ್ದೂಲ್ ಠಾಕೂರ್ ಸಹ ಸ್ಪರ್ಧೆ ನಡೆಸ್ತಿದ್ದಾರೆ. ಈಗಾಗಲೇ ಮೂರು ಫಾರ್ಮೆಟ್ನಲ್ಲೂ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ದು, ಶಾರ್ದೂಲ್ ತಂಡದ ಖಾಯಂ ಆಟಗಾರ ಆಗಿದ್ದಾರೆ. ಇದರಿಂದ ಹಾರ್ದಿಕ್ ಕೇವಲ ಫಿಟ್ನೆಸ್ನಲ್ಲಿ ಪಾಸಾದ್ರೆ ಸಾಲದು, ಮುಂದಿನ ದಿನಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಲೇಬೇಕು. ಆಗ ಮಾತ್ರ ತಂಡಕ್ಕೆ ಎಂಟ್ರಿ ಕೊಡೋಕೆ ಸಾಧ್ಯ. ಇಲ್ಲವಾದಲ್ಲಿ ಕ್ರಿಕೆಟ್ನಿಂದಲೇ ಗೇಟ್ಪಾಸ್ ಪಡೆಯೋದು ಪಕ್ಕಾ.