ಈಗ, ಬಾಹುಬಲಿ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದತ್ತ ಹಾಲಿವುಡ್​ನವರು ಕುಡ ಕಣ್ಣೆತ್ತಿ ನೋಡುವಂತೆ ಮಾಡಿರುವ ನಿರ್ದೇಶಕ ರಾಜಮೌಳಿ ಇದೀಗ RRR ಅನ್ನೋ ಟೈಟಲ್​ನಲ್ಲಿ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾ ತಯಾರಿಯಲ್ಲಿದ್ದಾರೆ. ಇದರ ನಡುವೆಯೇ ರಾಜಮೌಳಿ ಹೆಸರು ಹಾಲಿವುಡ್​ ಸಿನಿಮಾದ ಜೊತೆಗೆ ತಳುಕು ಹಾಕ್ತಿರೋದು ಕೇಳಿ ಬರ್ತಿದೆ. ಹೌದು.. ಈ ಬಗ್ಗೆ ಸ್ವತಃ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​​ ರಿವೀಲ್​ ಮಾಡಿದ್ದು, ಮಗನ ಸಿನಿಮಾ ಪ್ರೀತಿ, ಏಳಿಗೆ ಬಗ್ಗೆ ಬಹಳಷ್ಟು ಹೆಮ್ಮೆ ವ್ಯಕ್ತ ಪಡಿಸಿದ್ದಾರೆ.

ಹೌದು.. ಹಾಲಿವುಡ್​ ನಟ ರೈಮಂಡ್​​ಗೆ ವಿಜಯೇಂದ್ರ ಪ್ರಸಾದ್​ ಕಥೆ ಬರೆದಿದ್ದು, ರಾಜಮೌಳಿ ನಿರ್ದೇಶಕ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​​, ತೆಲುಗು ಟಿವಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಈ ಕಥೆ ಲೈವ್​ ಆ್ಯನಿಮೇಷನ್​ ಒಳಗೊಂಡಿದ್ದು, ಹಾಲಿವುಡ್​ನಲ್ಲೇ ಸಿನಿಮಾ ಮೂಡಿ ಬರಲಿದೆ. ದೊಡ್ಡ ಬಜೆಟ್​ನ ಪ್ರಾಜೆಕ್ಟ್​​ ಇದಾಗಿದೆ ಅಂತ ವಿಜಯೇಂದ್ರ ಪ್ರಸಾದ್​​ ತಿಳಿಸಿದ್ದಾರೆ. ಆದ್ರೆ ‘ಇದೊಂದು ಇಂಡಿಯನ್​ ಕಂಟೆಂಟ್​ ಸಿನಿಮಾನೇ. ಆದ್ರೆ ಅದನ್ನ ಇಂಟರ್​ನ್ಯಾಷನಲ್ ಮಾನದಂಡಗಳನ್ನ ಒಳಗೊಂಡಿರುತ್ತೆ’ ಅನ್ನೋದು ವಿಜಯೇಂದ್ರ ಪ್ರಸಾದ್​ ಮಾತು.

‘ನೀವು ಹಾಗಾದ್ರೆ ಹಾಲಿವುಡ್​ಗೆ ಹೋಗ್ತಿದ್ದೀರಾ ಅಂತಾಯ್ತು?’ ಎಂದು ನಟ ಅಲಿ ಕೇಳಿದ ಪ್ರಶ್ನೆಗೆ, ‘ಅವರು ನನ್ನನ್ನ ಅಲ್ಲಿಗೆ ಕರೆದುಕೊಂಡು ಹೋಗಲ್ಲ. ನಾನೆನಿದ್ರೂ ನಾಲ್ಕು ಗೋಡೆಗಳ ಮಧ್ಯೆಯೇ ಕೂತು ಕಥೆ ಬರೆಯಬೇಕು. ಅವರು ಮಾತ್ರ ಹೋಗ್ತಾರೆ’ ಅಂತ ವಿಜಯೇಂದ್ರ ಪ್ರಸಾದ್ ಹಾಸ್ಯಾಸ್ಪದವಾಗಿ ಉತ್ತರಿಸಿದ್ದಾರೆ​​.

ಟಾಲಿವುಡ್​ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ರಾಜಮೌಳಿ, ಈಗಾಗಲೇ ಇಲ್ಲಿ ಸ್ಟಾರ್​ ನಿರ್ದೇಶಕ, ಪ್ಯಾನ್​ ಇಂಡಿಯಾ ಡೈರೆಕ್ಟರ್​ ಅನ್ನೋ ಬಿರುದನ್ನ ಪಡೆದುಕೊಂಡಿದ್ದಾರೆ. ತಂದೆಯ ಬರವಣಿಗೆಯಲ್ಲೇ ಕಥೆಯನ್ನ ವಿಷ್ವಲೀ ತೋರಿಸಿ ಗೆದ್ದ ರಾಜಮೌಳಿ, ಮತ್ತೆ ತಮ್ಮ ತಂದೆಯ ಕಥೆಯಿಂದಲೇ ಹಾಲಿವುಡ್​ನತ್ತ ಪ್ರಯಾಣ ಬೆಳೆಸುತ್ತಿರೋದು ನಿಜಕ್ಕೂ ಹೆಮ್ಮೆಯ ವಿಚಾರ.

The post ಹಾಲಿವುಡ್​​ಗೆ ಕಿಚ್ಚು ಹಚ್ಚಲಿದ್ದಾರೆ ತಂದೆ-ಮಗ; ವಿಜಯೇಂದ್ರ ಕಥೆ, ರಾಜಮೌಳಿ ಡೈರೆಕ್ಷನ್ appeared first on News First Kannada.

Source: newsfirstlive.com

Source link