ಹೈದರಾಬಾದ್: ಟಾಲಿವುಡ್ ಖ್ಯಾತ ನಿರ್ದೇಶಕ ರಾಜಮೌಳಿ ಹಾಲಿವುಡ್‍ನಲ್ಲಿ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಅವರ ತಂದೆ ವಿಜಯೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಬಾಹುಬಲಿ ಸಿನಿಮಾದ ಮೂಲಕ ಇಡೀ ವಿಶ್ವವೇ ಟಾಲಿವುಡ್ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ ಹಾಲಿವುಡ್‍ನಲ್ಲಿ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಆಗಾಗ ಹರಿದಾಡುತ್ತಲೇ ಇತ್ತು. ಆದರೀಗ ಈ ಮಾತು ಸತ್ಯ ಆಗುತ್ತಿದೆ. ಹೌದು, ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಂದರ್ಶನವೊಂದರಲ್ಲಿ ರಾಜಮೌಳಿ ಹಾಲಿವುಡ್‍ನಲ್ಲಿ ಸಿನಿಮಾ ನಿರ್ದೇಶಿಸಿತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ವಿಶೇಷವೆಂದರೆ ರಾಜಮೌಳಿಯವರು ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ವಿಜಯೇಂದ್ರರವರೆ ಕಥೆ ಬರೆಯುತ್ತಿದ್ದು, ಇದು ಐತಿಹಾಸಿಕ ಕತೆ ಆಧಾರಿಸಿದ ಸಿನಿಮಾವಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಚಿತ್ರ ಕುರಿತಂತೆ ಹಾಲಿವುಡ್ ಪ್ರಖ್ಯಾತ ನಿರ್ಮಾಣ ಸಂಸ್ಥೆಯೊಂದಿಗೆ ಮಾತುಕತೆ ಮಗಿದಿದ್ದು, ಈ ಸಿನಿಮಾದಲ್ಲಿ ಯಾವ ನಟರು ಇರುವುದಿಲ್ಲ. ಇದೊಂದು ಅನಿಮೇಷನ್ ಸಿನಿಮಾ ಆಗಿರಲಿದ್ದು, ಚಿತ್ರದ ಕಥೆ ಭಾರತದ ಪರಿಸರದ್ದೇ ಆಗಿರುತ್ತದೆ ಎಂದು ಹೇಳಿದ್ದಾರೆ.

ಸದ್ಯ ನಿರ್ದೇಶಕ ರಾಜಮೌಳಿ ಟಾಲಿವುಡ್‍ನ ಸ್ಟಾರ್ ನಟರಾದ ರಾಮ್‍ಚರಣ್ ಹಾಗೂ ಎನ್‍ಟಿಆರ್ ಅಭಿನಯಿಸುತ್ತಿರುವ ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಈ ಸಿನಿಮಾದಲ್ಲಿ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಈ ಸಿನಿಮಾದಲ್ಲ ಬಾಲಿವುಡ್ ನಟಿ ಅಲಿಯಾ ಭಟ್ ನಾಯಕಿಯಾಗಿ ಅಭಿನಯಿಸಿದ್ದಾರೆ.

The post ಹಾಲಿವುಡ್ ಸಿನಿಮಾ ಮಾಡಲಿದ್ದಾರೆ ರಾಜಮೌಳಿ : ವಿಜಯೇಂದ್ರ ಪ್ರಸಾದ್ appeared first on Public TV.

Source: publictv.in

Source link