ಹಾವು ಹಿಡಿಯುವ ಭರದಲ್ಲಿ ಅದರಿಂದ ಕಚ್ಚಿಸಿಕೊಂಡರೂ ಕುಡುಕ ಯುವಕನ ಹುಚ್ಚಾಟ ಗಾಬರಿಗೊಳಿಸುವಂಥದ್ದು! | Man in inebriated state bitten by a snake while attempting to catch it, but refuses to go hospitalಜನ ಆಸ್ಪತ್ರೆಗೆ ಹೋಗಲೋ ಅಂತ ಹೇಳುತ್ತಿದ್ದರೂ ‘ಹಣೆಬರಹದಲ್ಲಿ ಸಾವು ಬರೆದಿದ್ರೆ ಯಾರು ತಪ್ಪಿಸಕ್ಕಾಯ್ತದೆ,’ ಅಂತಾನೆ. ಜನ ಅವನನ್ನು ಹಾಸ್ಪಿಟಲ್ ಕರೆದೊಯ್ದು ಅಡ್ಮಿಟ್ ಮಾಡಿದರೂ ಅಲ್ಲಿಂದ ಪರಾರಿಯಾಗಿದ್ದಾನಂತೆ.

TV9kannada Web Team


| Edited By: Arun Belly

Oct 05, 2022 | 4:22 PM
ತುಮಕೂರು: ಕುಡಿತದ ಅಮಲಿನಲ್ಲಿ ಕುಡುಕರು (drunk) ನಡೆಸುವ ಹುಚ್ಚಾಟಗಳನ್ನು ನಾವು ನೋಡಿದ್ದೇವೆ. ಆದರೆ ಬೆಚ್ಚಿಸುವ, ಆತಂಕ ಮೂಡಿಸುವ ಹುಚ್ಚಾಟ ಮಾರಾಯ್ರೇ. ತುಮಕೂರು (Tumakuru) ನಗರದಿಂದ ನಮಗೆ ಲಭ್ಯವಾಗಿರುವ ವಿಡಿಯೋ ಇದು. ಇವನ ಹೆಸರು ಸಲೀಂ (Salim) ಅಂತೆ. ಕುಡಿದ ಮತ್ತಿನಲ್ಲಿ ನಾಗರಹಾವೊಂದನ್ನು ಹಿಡಿದಿದ್ದಾನೆ. ಅವನು ಉರಗ ತಜ್ಞನೇನೂ ಅಲ್ಲ ಹಾಗಾಗಿ ಬಲಗೈಗೆ ಅದರಿಂದ ಕಚ್ಚಿಸಿಕೊಂಡಿದ್ದಾನೆ. ಆದರೂ ಹಾವನ್ನು ಹಿಡಿದು ಅದನ್ನು ಎಡಗೈಗೆ ಬಟ್ಟೆಯಂತೆ ಸುತ್ತಿಕೊಂಡಿದ್ದಾನೆ. ಜನ ಆಸ್ಪತ್ರೆಗೆ ಹೋಗಲೋ ಅಂತ ಹೇಳುತ್ತಿದ್ದರೂ ‘ಹಣೆಬರಹದಲ್ಲಿ ಸಾವು ಬರೆದಿದ್ರೆ ಯಾರು ತಪ್ಪಿಸಕ್ಕಾಯ್ತದೆ,’ ಅಂತಾನೆ. ಜನ ಅವನನ್ನು ಹಾಸ್ಪಿಟಲ್ ಕರೆದೊಯ್ದು ಅಡ್ಮಿಟ್ ಮಾಡಿದರೂ ಅಲ್ಲಿಂದ ಪರಾರಿಯಾಗಿದ್ದಾನಂತೆ.

TV9 Kannada


Leave a Reply

Your email address will not be published.