ಹಾವೇರಿ: ರೈತರೊಬ್ಬರು ಕಷ್ಟಪಟ್ಟು ಬೆಳೆಸುತ್ತಿದ್ದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕತ್ತರಿಸಿ ಹಾಕಿರುವುದು ಅಕ್ಷಮ್ಯ – Unidentified miscreants fell areca plants grown by a peasant at Kusnoor in Haveriತಮ್ಮ ಕುಟುಂಬದೊಂದಿಗೆ ಅಡಿವೆಪ್ಪ ದೀಪಾವಳಿ ಹಬ್ಬ ಆಚರಿಸುವುದರಲ್ಲಿ ಮಗ್ನರಾಗಿದ್ದಾಗ, ಕಿಡಿಗೇಡಿಗಳು ಜಮೀನಿಗೆ ನುಗ್ಗಿ ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ.

TV9kannada Web Team


| Edited By: Arun Belly

Oct 28, 2022 | 2:53 PM
ಹಾವೇರಿ: ದುಷ್ಕರ್ಮಿಗಳ ಹೇಡಿತನದ (cowardice ) ಕೆಲಸ ಈ ರೈತನ ಬದುಕನ್ನೇ ಹಾಳು ಮಾಡಿದೆ. ಇವರ ಹೆಸರು ಅಡಿವೆಪ್ಪ ಆಲದಕಟ್ಟಿ (Adiveppa Aladkatti), ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕುಸುನೂರು ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಅಡಿಕೆ ಗಿಡಗಳನ್ನು (areca plants) ಬಹಳ ಜೋಪಾನದಿಂದ ಮಕ್ಕಳನ್ನು ಬೆಳೆಸಿದಂತೆ ಸಂರಕ್ಷಿಸಿ ಬೆಳೆಸುತ್ತಿದ್ದರು. ಆದರೆ ತಮ್ಮ ಕುಟುಂಬದೊಂದಿಗೆ ಇವರು ದೀಪಾವಳಿ ಹಬ್ಬ ಆಚರಿಸುವುದರಲ್ಲಿ ಮಗ್ನರಾಗಿದ್ದಾಗ, ಕಿಡಿಗೇಡಿಗಳು ಜಮೀನಿಗೆ ನುಗ್ಗಿ ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಅಡಿವೆಪ್ಪ ಅವರ ನೋವು, ಯಾತನೆ, ಸಂಕಟ, ಹತಾಷೆ ಮತ್ತು ಅಸಹಾಯಾಕತನ ರೋದನೆಯಲ್ಲಿ ಪರಿವರ್ತನೆಗೊಳ್ಳೋದು ನೋಡಲಾಗದು. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

TV9 Kannada


Leave a Reply

Your email address will not be published.