ಹಾಸನಕ್ಕೂ, ಹೊಳೆನರಸೀಪುರಕ್ಕೂ ಏನು ಸಂಬಂಧ? ಶಾಸಕ ರೇವಣ್ಣಗೆ ಕಂದಾಯ ಸಚಿವ ಅಶೋಕ್ ನೇರ ಪ್ರಶ್ನೆ | Revenue minister R Ashoka reacts to Holenarasipur JDS MLA HD Revanna oppposiotion to new DC office in Hassan


ಹಾಸನಕ್ಕೂ, ಹೊಳೆನರಸೀಪುರಕ್ಕೂ ಏನು ಸಂಬಂಧ? ಶಾಸಕ ರೇವಣ್ಣಗೆ ಕಂದಾಯ ಸಚಿವ ಅಶೋಕ್ ನೇರ ಪ್ರಶ್ನೆ

ಹಾಸನಕ್ಕೂ, ಹೊಳೆನರಸೀಪುರಕ್ಕೂ ಏನು ಸಂಬಂಧ ರೇವಣ್ಣನವರೇ? ಅಭಿವೃದ್ಧಿ ಕೆಲಸಗಳಿಗೆ ಯಾರೂ ತೊಂದರೆ ನೀಡಬಾರದು- ಕಂದಾಯ ಸಚಿವ ಅಶೋಕ್ ಗರಂ

ಹಾಸನ: ಹಾಸನದಲ್ಲಿ ತಾಲೂಕು ಕಚೇರಿ ಮತ್ತು ಡಿಸಿ ಕಚೇರಿ ನಿರ್ಮಾಣ ವಿಚಾರವಾಗಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಹೊಳೆನರಸೀಪುರ ಶಾಸಕ ಹೆಚ್​.ಡಿ.ರೇವಣ್ಣ ವಿರೋಧ ವ್ಯಕ್ತಪಡಿಸಿದ್ದು ಸ್ಥಳೀಯ ಅಧಿಕಾರಿಗಳ ವಿರುದ್ಧ ವಾಚಾಗೋಚರವಾಗಿ ಬೈದಾಡಿದ್ದಾರೆ. ಹಾಸನ ಡಿಸಿ ಕಛೇರಿ ಮತ್ತು ತಾಲ್ಲೂಕು ಕಛೇರಿ ತೆರವಿಗೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಿಗೇ ಹಾಸನದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ರೇವಣ್ಣ ವರ್ತನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನಕ್ಕೂ, ಹೊಳೆನರಸೀಪುರಕ್ಕೂ ಏನು ಸಂಬಂಧ ರೇವಣ್ಣನವರೇ? ಎಂದು ನೇರವಾಗಿ ಪ್ರಶ್ನಿಸಿರುವ ಸಚಿವ ಅಶೋಕ್ ಅಭಿವೃದ್ಧಿ ಕೆಲಸಗಳಿಗೆ ಯಾರೂ ತೊಂದರೆ ನೀಡಬಾರದು. ಹಾಸನದಲ್ಲಿ ಆಡಳಿತಸೌಧ ನಿರ್ಮಿಸಿದರೆ ನಿಮಗ್ಯಾಕೆ ಹೊಟ್ಟೆ ಉರಿ? ನಿಮ್ಮ ಕೈಯಲ್ಲಿ ಮಾಡಲು ಆಗದಿದ್ದರೂ, ಯಾಕೆ ಕಲ್ಲು ಹಾಕೋ ಕೆಲಸ ಮಾಡ್ತೀರಾ? ನಿಮ್ಮ ಕ್ಷೇತ್ರವನ್ನು ನೋಡಿಕೊಳ್ಳಿ, ಇಲ್ಲಿಯವರೆಗೂ ಬರೋದು ಬೇಡ ಎಂದು ಮಾಜಿ ಸಚಿವ ಹೆಚ್​​. ಡಿ.ರೇವಣ್ಣಗೆ ಸಚಿವ ಅಶೋಕ್ ಟಾಂಗ್​​ ನೀಡಿದ್ದಾರೆ. ಅವರ ಅವಧಿಯಲ್ಲಿ ಈ ಕೆಲಸ ಮಾಡಿಲ್ಲ ಅಂತ ಬೇಸರ ಇರಬಹುದು. ನಾನೇ ಮಾಡಿದ್ದು ಅನ್ನೋ ಮೈಂಡ್ ಸೆಟ್​ನಿಂದ ರೇವಣ್ಣ ಹೊರಬರಲಿ ಎಂದು ಸಚಿವ ಅಶೋಕ್ ಕಿವಿಮಾತು ಹೇಳಿದರು.

TV9 Kannada


Leave a Reply

Your email address will not be published.