ಹಾಸನ: ಒಂಟಿ ಸಲಗವೊಂದು ನಗರದೊಳಗೆ ಬೆಳ್ಳಂಬೆಳಗ್ಗೆ ಎಂಟ್ರಿ ಕೊಟ್ಟಿದ್ದು ಹಾಯಾಗಿ ಮಲಗಿದ್ದ ಜನರಿಗೆ ಶಾಕ್ ನೀಡಿದೆ. ಕಳೆದ ಮೂರು ದಿನಗಳಿಂದ ಸಕಲೇಶಪುರ ತಾಲ್ಲೂಕಿನ ಬನವಾಸೆ-ಚಿನ್ನಳ್ಳಿ ಮಧ್ಯೆ ಬೀಡುಬಿಟ್ಟಿರುವ ಒಂಟಿ ಸಲಗ ಜನರಲ್ಲಿ ಆತಂಕ ಸೃಷ್ಟಿಸಿದೆ. ಕಾಡನೆ ಬರುತ್ತಿರುವುದನ್ನು ಗಮನಿಸಿದ ಹಸುಗಳು ಗುಂಒಉ ಭಯಬೀತಗೊಂಡು ಸುಮ್ಮನೆ ನಿಂತಿದ್ದು ಗುಂಪಿನ ಬಳಿ ಬಂದ ಸಲಗ ಆಮೇಲೆ ಕಾಡಿನತ್ತ ಹೆಜ್ಜೆ ಹಾಕಿದೆ. ಸದ್ಯ ಆನೆಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇತ್ತೀಚಿಗೆ ಹಾಸನ ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು ಜನರು ಭಯದಲ್ಲೇ ಕಾಲ ಕಳೆತುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳದೆ ಕೆಲವು ತಿಂಗಳುಗಳ ಹಿಂದೆ ಗ್ರಾಮದ ಜಮೀನಿಗೆ ನುಗ್ಗಿದ ಕಾಡಾನೆಯೊಂದು ಬೆಳೆಯನ್ನು ಸಂಪೂರ್ಣ ನಾಶಗೊಳಿಸಿ ಅನ್ನದಾತನನ್ನು ಸಕಂಷ್ಟಕ್ಕೆ ತಳ್ಳಿತ್ತು