ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು ರಸ್ತೆ ಬದಿಯಲ್ಲಿ ಸಂಗ್ರಹಿಸಿದ ಮಣ್ಣು ಕುಸಿತವಾಗಿದ್ದು ರೈತರ ಜಮೀನಿಗೆ ಹರಿದಿದೆ.

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು-ಮಂಗಳೂರು ರಸ್ತೆ ಕಾಮಗಾರಿಗಾಗಿ ಮಣ್ಣು ತೆಗೆಯಲಾಗಿತ್ತು. ಅಲ್ಲದೇ ತಡೆಗೋಡೆ ನಿರ್ಮಿಸದೆ ರಸ್ತೆ ಬದಿ ನೂರಾರು ಲಾರಿ ಲೋಡ್ ಮಣ್ಣನ್ನ ಸುರಿಯಲಾಗಿತ್ತು ಎನ್ನಲಾಗಿದೆ. ಹೀಗಾಗಿ ಭಾರೀ ಮಳೆಯಿಂದ ಸುಮಾರು 40 ಎಕರೆಗೂ ಹೆಚ್ಚು ಪ್ರದೇಶದ ಭತ್ತದ ಗದ್ದೆ ಅಡಿಕೆ ತೋಟಗಳಿಗೆ ಮಣ್ಣು ಹರಿದಿದ್ದು ಕಾಫಿ, ಮೆಣಸು, ಭತ್ತ ಬೆಳೆ ಹಾನಿಯಾಗಿದೆ.

The post ಹಾಸನದಲ್ಲಿ ಭಾರೀ ಮಳೆಗೆ ರಸ್ತೆ ಬದಿಯ ಮಣ್ಣು ಕುಸಿತ; ಕಾಫಿ, ಮೆಣಸು, ಭತ್ತ ಬೆಳೆ ಹಾನಿ appeared first on News First Kannada.

Source: newsfirstlive.com

Source link