ಹಾಸನ: ಜಿಲ್ಲೆಯಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್​ಡೌನ್​ ವಿಸ್ತರಿಸಲು ನಿರ್ಧರಿಸಲಾಗಿದೆ ಅಂತಾ ಸಚಿವ ಕೆ.ಗೋಪಾಲಯ್ಯ ಮಾಹಿತಿ ನೀಡಿದ್ದಾರೆ.

ಸಿಎಂ ಸಭೆ ಬಳಿಕ ಮಾತನಾಡಿದ ಗೋಪಾಲಯ್ಯ.. ಜಿಲ್ಲೆಯಲ್ಲಿ ಪ್ರತಿವಾರ ಪಾಸಿಟಿವ್ ರೇಟ್ ಕಡಿಮೆಯಾಗುತ್ತಿದೆ. ಮುಂದಿನ ವಾರದೊಳಗೆ ಬಹಳಷ್ಟು ಕಡಿಮೆಯಾಗೋ ಸಾಧ್ಯತೆ ಇದೆ. 23 ಹಳ್ಳಿಗಳಲ್ಲಿ ಪಾಸಿಟಿವ್​​ಗಳ ಸಂಖ್ಯೆ ‌ಜಾಸ್ತಿಯಿದೆ.

ಸೋಂಕಿತರು ಸಿಸಿಸಿಯಲ್ಲಿ ಕಡ್ಡಾಯವಾಗಿ ಚಿಕಿತ್ಸೆ ಪಡೆಯಲೇಬೇಕು. ಇನ್ನೊಂದು ವಾರ ಲಾಕ್ ಡೌನ್ ಮುಂದುವರಿಕೆಯಾಗಲಿದೆ. ನಾಳೆ ನಮ್ಮ ಜಿಲ್ಲೆಗೆ ಸಿಎಂ ಯಡಿಯೂರಪ್ಪ ಬರಲಿದ್ದಾರೆ. ಈಗ ಇರುವ ರೀತಿಯಲ್ಲಿ ಲಾಕ್​ಡೌನ್ ಮುಂದುವರಿಕೆ ಮಾಡುತ್ತೇವೆ ಎಂದರು.

The post ಹಾಸನದಲ್ಲಿ ಮತ್ತೊಂದು ವಾರ ಲಾಕ್​ಡೌನ್​ ವಿಸ್ತರಣೆ appeared first on News First Kannada.

Source: newsfirstlive.com

Source link