ಹಾಸನದಲ್ಲಿ ಮಳೆ ಅವಾಂತರ; ನೆಲಕ್ಕೆ ಕುಸಿದು ಬಿದ್ದ ಶಾಲಾ ಕಟ್ಟಡ, ಕೊಠಡಿ ಇಲ್ಲದೆ ಅತಂತ್ರರಾದ ವಿದ್ಯಾರ್ಥಿಗಳು | Government school collapse in hassan due to continuous rain


ಹಾಸನದಲ್ಲಿ ಮಳೆ ಅವಾಂತರ; ನೆಲಕ್ಕೆ ಕುಸಿದು ಬಿದ್ದ ಶಾಲಾ ಕಟ್ಟಡ, ಕೊಠಡಿ ಇಲ್ಲದೆ ಅತಂತ್ರರಾದ ವಿದ್ಯಾರ್ಥಿಗಳು

ಹಾಸನದಲ್ಲಿ ಮಳೆ ಅವಾಂತರ; ನೆಲಕ್ಕೆ ಕುಸಿದು ಬಿದ್ದ ಶಾಲಾ ಕಟ್ಟಡ, ಕೊಠಡಿ ಇಲ್ಲದೆ ಅತಂತ್ರರಾದ ವಿದ್ಯಾರ್ಥಿಗಳು

ಹಾಸನ: ಕರ್ನಾಟಕ ರಾಜ್ಯದಲ್ಲಿ ನಿರಂತರವಾಗಿ ಅಬ್ಬರಿಸ್ತಿರೋ ವರುಣನ ಅವಾತರಕ್ಕೆ ಎರಡು ದಶಕದಿಂದ ತುಂಬಿರದ ಕೆರೆಗಳು ಕೋಡಿ ಬಿದ್ದಿವೆ. ನೀರೇ ಕಾಣದ ಹಳ್ಳಗಳು ಭೋರ್ಗರೆಯುತ್ತಿವೆ. ದೇಗುಲ, ಮನೆ, ಗದ್ದೆಗಳು ಜಲಾವೃತವಾಗಿವೆ. ಹಳ್ಳಿಹಳ್ಳಿಗಳು ಕೂಡಾ ದ್ವೀಪದಂತಾಗಿವೆ.

ಹಾಸನ ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರೆದಿದೆ. ಮಳೆಯಿಂದಾಗಿ ಶಾಲಾ ಕೊಠಡಿ ಕುಸಿದುಬಿದ್ದ ಘಟನೆ ನಡೆದಿದೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ನೇರ್ಲಿಗೆ ಗ್ರಾಮದಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಶಾಲೆ ಕಟ್ಟಡ ಕುಸಿದು ಬಿದ್ದಿದೆ. ಸದ್ಯ ರಾತ್ರಿ ಕಟ್ಟಡ ಕುಸಿದಿರುವುದರಿಂದ ಭಾರೀ ಅನಾಹುತ ತಪ್ಪಿದೆ. ಒಂದರಿಂದ ಏಳನೇ ತರಗತಿವರೆಗೆ 80 ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಕಲಿಯುತ್ತಿದ್ದಾರೆ. ಕಟ್ಟಡ ಕುಸಿದಿರೋದ್ರಿಂದ ಮಕ್ಕಳಿಗೆ ಕೊಠಡಿ ಕೊರತೆ ಸಮಸ್ಯೆ ಎದುರಾಗಿದೆ. ಮಕ್ಕಳಿಗೆ ಪರ್ಯಾಯ ಕೊಠಡಿ ವ್ಯವಸ್ಥೆ ಮಾಡಲು ಪೋಷಕರರು ಆಗ್ರಹಿಸಿದ್ದಾರೆ.

ನೀರಿನಲ್ಲಿ ಕೊಚ್ಚಿಹೋದ ಸೇತುವೆ
ನಿರಂತರ ಮಳೆಯಿಂದ ರಾಮನಗರದ ಮೆಳೇಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಜೊತೆಗೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಸೇತುವೆ ಕೊಚ್ಚಿ‌ ಹೋಗಿದ್ದರಿಂದ ಮೆಳೇಹಳ್ಳಿ ಸೇರಿದಂತೆ ಐದಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಐದು ಕಿಲೋಮೀಟರ್ ದೂರ ಸಂಚರಿಸಿ ಗ್ರಾಮಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಅನೇಕ ವರ್ಷಗಳಿಂದ ಸೇತುವೆ ದುಸ್ಥಿತಿಯಾಗಿ ಬಿರುಕು ಬಿಟ್ಟಿತ್ತು. ಕಳೆದ ಒಂದು ವಾರದಿಂದ ನಿರಂತರ ಮಳೆಯ ಪರಿಣಾಮ ಸೇತುವೆ ಕೊಚ್ಚಿ ಹೋಗಿದೆ. ಮೆಳೇಹಳ್ಳಿ, ಮಾರೇಗೌಡನದೊಡ್ಡಿ, ಅರಳಿಮರದೊಡ್ಡಿ, ಜೋಗಿದೊಡ್ಡಿ, ಅಂಕನಹಳ್ಳಿ, ಹುಣಸೇದೊಡ್ಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಹಾಳಾಗಿದೆ.

ಇದನ್ನೂ ಓದಿ: ವರುಣನ ಅವಾಂತರದ ಮಧ್ಯೆ ಮೀನನ್ನು ನುಂಗಿನೀರು ಕುಡಿದ ಹಾವು

TV9 Kannada


Leave a Reply

Your email address will not be published. Required fields are marked *